ನವದೆಹಲಿ, ಮಾ.11 (DaijiworldNews/PY): "ಇನ್ನು ಮುಂದೆ ದೇಶದ ಎಲ್ಲಾ ಟೆಲಿಕಾಂ ಸೇವಾದಾರ ಕಂಪೆನಿಗಳು ಕೇಂದ್ರ ಸರ್ಕಾರ ಅನುಮೋದಿಸಿದ ಕಂಪೆನಿಗಳ ಹಾಗೂ ತಯಾರಕ ಉಪಕರಣಗಳನ್ನು ಉಪಯೋಗಿಸಿಕೊಂಡು ನೆಟ್ವರ್ಕ್ ವಿಸ್ತರಣೆ ಸೇರಿದಂತೆ ಉನ್ನತೀಕರಣ ಹಾಗೂ ತಾಂತ್ರಿಕ ಕಾರ್ಯವನ್ನು ಮಾಡಬೇಕು" ಎಂದು ಆದೇಶ ನೀಡಿದೆ.
ಸಾಂದರ್ಭಿಕ ಚಿತ್ರ
ಚೀನಾ ಮೂಲದ ಉಪಕರಣಗಳನ್ನು ತಡೆಯುವ ಹಾಗೂ ಉದ್ಯಮ ಸಹಭಾಗಿತ್ವ ಹೊಂದಿರುವ ದೇಶಗಳ ಜೊತೆ ವಹಿವಾಟು ವೃದ್ದಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಈ ಹೊಸ ನಿಯಮವನ್ನು ಜಾರಿ ಮಾಡುತ್ತಿದೆ.
ಚೀನಾ ಮೂಲದ ಉಪಕರಣಗಳನ್ನು ತಡೆಯುವ ಮತ್ತು ಉದ್ಯಮ ಸಹಭಾಗಿತ್ವ ಹೊಂದಿರುವ ದೇಶಗಳೊಡನೆ ವಹಿವಾಟು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಮಾಡುತ್ತಿದೆ.
ದೇಶದಲ್ಲಿ ಪ್ರಸ್ತುತ ವೊಡಾಫೋನ್ ಐಡಿಯಾ ಹಾಗೂ ಏರ್ಟೆಕ್ ಚೀನಾ ಮೂಲದ ಕಂಪೆನಿಗಳ ಜೊತೆ ಉಪಕರಣ ಖರೀದಿ ಒಪ್ಪಂದ ಹೊಂದಿದ್ದು, ಜಿಯೋ ಕೊರಿಯಾ ಮೂಲದ ಸ್ಯಾಮ್ಸಂಗ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಕೇಂದ್ರ ಸರ್ಕಾರವು, ದೇಶದಲ್ಲಿ 5ಜಿ ನೆಟ್ವರ್ಕ್ನ ಅಳವಡಿಕೆಗೂ ಮುನ್ನ ಚೀನಾ ಮೂಲದ ಹುವೈ ಹಾಗೂ ಝೆಡ್ಟಿಇ ಕಂಪೆನಿಗಳನ್ನು ದೂರ ಇರಿಸುವ ಉದ್ದೇಶ ಹೊಂದಿದೆ.