ಬೆಂಗಳೂರು, ಮಾ.11 (DaijiworldNews/HR): ಕನಸಿನಲ್ಲೂ ಲಭಿಸದ ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಕದನ ಆರಂಭವಾಗಿದೆ ಎಂದು ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, "ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಆಂತರಿಕ ಸಂಘರ್ಷ ಶಮನ ಮಾಡುವುದಕ್ಕೆ ಸುರ್ಜೇವಾಲಾ ಅವರನ್ನು ಮುಲಾಮು ಸಮೇತ ಕಳುಹಿಸಿಕೊಡಲು ಕಾಂಗ್ರೆಸ್ ಪಕ್ಷದ ಒಂದು ಕುಟುಂಬ ನಿರ್ಧರಿಸಿದ್ದು, ನಾವಿಕನಿಲ್ಲದ ಕಎನಾಟಕ ಕಾಂಗ್ರೆಸ್ ದಿಕ್ಕೆಟ್ಟು ನಿಂತಿದೆ ಎಂದಿದ್ದಾರೆ.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಇತ್ತೀಚೆಗೆ ಮೈಸೂರು ಮೇಯರ್ ವಿಚಾರದಲ್ಲಿ ಸಂಘರ್ಷ ಏರ್ಪಟ್ಟಿದ್ದು, ಅದು ಕೇವಲ ಮನಸ್ತಾಪವಾಗಿರಲಿಲ್ಲ, ಅದು ಸಿಎಂ ಕುರ್ಚಿಗಾಗಿ ನಡೆದ ಕದನವಾಗಿದ್ದು, ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳು ಪಕ್ಷದಲ್ಲಿ ಹಿಡಿತ ಸಾಧಿಸಲು ಹೆಣಗಾಡುತ್ತಿದ್ದಾರೆ" ಎಂದು ಹೇಳಿದೆ.