ಬೆಂಗಳೂರು,ಮಾ.11 (DaijiworldNews/HR): ರಮೇಶ್ ಜಾರಕಿಹೊಳಿಯವರು ಸಿಡಿ ಹಿಂದೆ ಷಡ್ಯಂತ್ರ ಇದೆ ಎಂದು ಪತ್ರ ಬರೆದಿದ್ದು, ಈ ಪ್ರಕರಣವನ್ನು ಎಸ್ಐಟಿ ತನಿಗೆಗೆ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತನಿಖೆಯನ್ನು ಇಷ್ಟು ದಿನದಲ್ಲೆ ಮುಗಿಸಿ ಎಂದು ಸಮಯ ನಿಗದಿ ಮಾಡಲು ಆಗುವುದಿಲ್ಲ, ಪೊಲೀಸರಿಗೆ ಪೂರ್ಣ ಸ್ವತಂತ್ರ ಕೊಟ್ಟಿದ್ದು, ರಾಜ್ಯದ ಜನತೆಗೆ ಸತ್ಯ ಗೊತ್ತಾಗುವುದಕ್ಕಾಗಿ ಶೀಘ್ರವಾಗಿ ಕೊಡಿ ಎಂದು ಹೇಳಿದ್ದೇವೆ" ಎಂದರು.
"ಎಸ್ಐಟಿಯವರು ಸಂಪೂರ್ಣ ತನಿಖೆ ನಡೆಸುತ್ತಿದ್ದು, ಪತ್ರದ ಮೇಲೆ ಪ್ರಾಥಮಿಕ ತನಿಖೆ ನಡೆಯಲಿದ್ದು, ತನಿಖೆಯಲ್ಲಿ ಏನು ಬೆಳವಣಿಗೆ ನೋಡಿ ಅವಶ್ಯಕತೆ ಎನಿಸಿದ್ದರೆ ಎಫ್ಐಆರ್ ದಾಖಲಾಗುತ್ತೆ" ಎಂದಿದ್ದಾರೆ.
ಇನ್ನು ಇದು ನಕಲಿ ಸಿಡಿ ಆದ ಮೇಲೆ ತನಿಖೆ ಏಕೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಕಲಿ ಸಿಡಿ ಮಾಡಿದವರು ಯಾರು, ಅದರ ಹಿನ್ನೆಲೆ ಏನು ಮತ್ತು ಎಲ್ಲೆಲ್ಲಿ ಆಗಿದೆ ಎಲ್ಲಾ ತನಿಖೆ ಆಗಬೇಕಲ್ಲ" ಎಂದು ಹೇಳಿದ್ದಾರೆ.