ನವದೆಹಲಿ, ಮಾ.11 (DaijiworldNews/PY): ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಬಾಲಿವುಡ್ನ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ವೈ ಪ್ಲಸ್ ಭದ್ರತೆ ನೀಡಿರುವುದಾಗಿ ವರದಿಯಾಗಿದೆ.
ಮಿಥುನ್ ಚಕ್ರವರ್ತಿ ಅವರಿಗೆ ಪಶ್ಚಿಮಬಂಗಾಳದ ಚುನಾವಣೆ ಹಿನ್ನೆಲೆ ಸಿಐಎಸ್ಎಫ್ ಭದ್ರತೆಯನ್ನು ನೀಡಲಿದ್ದು, ಇದನ್ನು ಎಸ್ಎಸ್ಜಿ ಎಂದು ಕೂಡಾ ಕರೆಯುತ್ತಾರೆ.
ಮಿಥುನ್ ಚಕ್ರವರ್ತಿ ಅವರು, ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
"ಪಶ್ಚಿಮ ಬಂಗಾಳ ಚುನಾವಣಾ ಹಿನ್ನೆಲೆ ಪ್ರಚಾರ ನಡೆಸುವ ವೇಳೆ ಮಿಥುನ್ ಚಕ್ರವರ್ತಿ ಅವರಿಗೆ ವೈ ಪ್ಲಸ್ ಹಾಗೂ ಸಿಐಎಸ್ಎಫ್ ಕಮಾಂಡೋ ಭದ್ರತೆಯನ್ನು ನೀಡಲಿದೆ" ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿರುವುದಾಗಿ ವರದಿ ಹೇಳಿದೆ.
ಪಶ್ಚಿಮಬಂಗಾಳದಲ್ಲಿ ಮಾರ್ಚ್ 27ರಿಂದ ಎಪ್ರಿಲ್ 29ರವರೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.