ಬೆಂಗಳೂರು, ಮಾ.11 (DaijiworldNews/PY): ಕಾಂಗ್ರೆಸ್ ಪಕ್ಷದ ಒಳಜಗಳವನ್ನು ಪ್ರಸ್ತಾಪಿಸಿದ ಬಿಜೆಪಿ, "ಜೆಡಿಎಸ್ ಬಿತ್ತಿದ ಬೀಜ ಕರ್ನಾಟಕ ಕಾಂಗ್ರೆಸ್ನಲ್ಲಿ ಬೆಳೆಯುತ್ತಿದೆ. ಇದು ಬೆಳೆ ಅಲ್ಲ, ಕಳೆ ಎಂದು ಡಿಕೆ ಶಿವಕುಮಾರ್ ಅವರಿಗೆ ಈಗ ಅರಿವಾಗುತ್ತಿದೆ" ಎಂದು ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಜೆಡಿಎಸ್ ಬಿತ್ತಿದ ಬೀಜ ಕರ್ನಾಟಕ ಕಾಂಗ್ರೆಸ್ನಲ್ಲಿ ಬೆಳೆಯುತ್ತಿದೆ. ಇದು ಬೆಳೆ ಅಲ್ಲ, ಕಳೆ ಎಂದು ಡಿಕೆ ಶಿವಕುಮಾರ್ ಅವರಿಗೆ ಈಗ ಅರಿವಾಗುತ್ತಿದೆ. ಈ ಕಳೆ ಎಂಬ ಸಿದ್ದರಾಮಯ್ಯ ಅವರನ್ನು ಬೇರು ಸಮೇತ ಕಿತ್ತು ಹಾಕಲು ಮೂಲ ಕಾಂಗ್ರೆಸ್ಸಿಗರು ಪಣ ತೊಟ್ಟಿದ್ದಾರೆ" ಎಂದಿದೆ.
"ವಲಸೆ ನಾಯಕ ಸಿದ್ದರಾಮಯ್ಯ ಅವರು ಸಂತ್ರಸ್ತ ಶಾಸಕ ಅಖಂಡ ಪರವಾಗಿ ನಿಂತರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಲಭೆಯ ಆರೋಪಿ ಸಂಪತ್ ರಾಜ್ ಪರವಾಗಿ ನಿಂತರು. ಇವರಿಬ್ಬರ ನಡುವಿನ ಸಂಘರ್ಷದಿಂದ ದಲಿತ ಶಾಸಕನಿಗೆ ಅನ್ಯಾಯವಾಗಿದೆ. ಕರ್ನಾಟಕ ಕಾಂಗ್ರೆಸ್ ಗಲಭೆಯ ಆರೋಪಿಗೆ ಬಹಿರಂಗ ಬೆಂಬಲ ನೀಡಿದೆ" ಎಂದು ಟೀಕೆ ಮಾಡಿದೆ.
"ಬಿಜೆಪಿ ನಡೆಸುತ್ತಿರುವ ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನದ ಮುಖವಾಣಿ ಬಸನಗೌಡ ಪಾಟೀಲ್ ಯತ್ನಾಳ್. ನಳಿನ್ ಕುಮಾರ್ ಕಟೀಲ್ ಅವರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದೆ ಮಜಾ ಅನುಭವಿಸುತ್ತ ನೋಡಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಬಿಜೆಪಿ ಕರ್ನಾಟಕ ಕೇವಲ ಒಡೆದ ಮನೆಯಲ್ಲ, ಛಿದ್ರಗೊಂಡು ಜೋಡಿಸಲಾಗದ ಮಡಿಕೆ. ಇವರ ಸಿಡಿ ಸರ್ಕಾರದ ಕಿತ್ತಾಟದಲ್ಲಿ ರಾಜ್ಯ ಅನಾಥವಾಗಿದೆ" ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.