ತುಮಕೂರು,ಮಾ.11 (DaijiworldNews/HR): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ದರ್ಶನ್ ಕಟೌಟ್ಗೆ ಅಭಿಮಾನಿಗಳು ಹಾಲು, ಪುಷ್ಟ ಸೇರಿದಂತೆ ವಿವಿಧ ಅಭಿಷೇಕಗಳನ್ನು ಮಾಡುತ್ತಿದ್ದಾರೆ. ಆದರೆ ತುಮಕೂರಿನಲ್ಲಿ ಮಾತ್ರ ಅಭಿಮಾನಿಗಳು ದರ್ಶನ್ ಕಟೌಟ್ಗೆ ಮಧ್ಯದಭಿಷೇಕ ಮಾಡಿ, ಅತಿರೇಕ ಮೆರೆದಿದ್ದಾರೆ ಎನ್ನಲಾಗಿದೆ.
ತುಮಕೂರಿನ ತ್ರಿಮೂರ್ತಿ ಚಿತ್ರಮಂದಿರದಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಟೌಟ್ಗೆ ದರ್ಶನ್ ಅಭಿಮಾನಿಗಳು ಮದ್ಯದ ಅಭಿಷೇಕ ಮಾಡಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವಂತೆ ಮಾಡಿದೆ.
ಇನ್ನು ದರ್ಶನ್ ಅಭಿಮಾನಿಗಳ ಅತಿರೇಕದ ವರ್ತನೆಯಿಂದಾಗಿ ಚಿತ್ರಮಂದಿರಕ್ಕೆ ಆಗಮಿಸಿರುವ ಸಾರ್ವಜನಿಕರು ಕೂಡ ಕಿರಿಕಿರಿ ಅನುಭವಿಸುವಂತಾಗಿದ್ದು, ಅವರ ಅತೀರೇಕದ ವರ್ತನೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.