ಬೆಳಗಾವಿ, ಮಾ.11 (DaijiworldNews/PY): ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ (92) ಅವರು ಗುರುವಾರ ಬೆಳಗ್ಗೆ ಕೆ ಕೆ ಕೊಪ್ಪ ಗ್ರಾಮದ ಸ್ವಗೃಹದಲ್ಲಿ ನಿಧನಾದರು.
ಸೋಮವ್ವ ಅವರು ಬೆಳಗಾವಿ ತಾಲೂಕಿನ ನಾಗೇರಹಾಳ ಗ್ರಾಮದವರಾಗಿದ್ದು, ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಪುತ್ರ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಸೋಮವ್ವ ಅವರು ತೀವ್ರ ನೊಂದಿದ್ದರು.
ಮೃತರ ಅಂತ್ಯಕ್ರಿಯೆಯು ಗುರುವಾರ ಸಂಜೆ ಕೆ.ಕೆ ಕೊಪ್ಪ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.