ಮೈಸೂರು, ಮಾ.11 (DaijiworldNews/HR): ನಮ್ಮ ಪಕ್ಷ ಬಿಟ್ಟು ಹೋಗುವವರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಜೆಡಿಎಸ್ ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು, ಬರೋರು ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಧು ಬಂಗಾರಪ್ಪ ಪಕ್ಷ ತೊರೆಯುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, "ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಳಬರು ಹೋದರೆ ಹೊಸಬರು ಬರ್ತಾರೆ. ಮಧು ಬಂಗಾರಪ್ಪ ಪಕ್ಷ ತೊರೆಯುವುದು ಹಳೆಯ ವಿಚಾರವಾಗಿದೆ. ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ" ಎಂದರು.
ಇನ್ನು "ಯಾರು ಹೋಗಲಿ ಬಿಡಲಿ ಪಕ್ಷಕ್ಕೇನು ನಷ್ಟವಿಲ್ಲ, ಅವರಿಗೆ ಲಾಭ ಆಗುತ್ತೆ ಎಂದು ಶಿಸ್ತು ಕ್ರಮ ಕೈಗೊಂಡಿಲ್ಲ. ದೇವೆಗೌಡರ ಕುಟುಂಬಕ್ಕೆ ಇದೇನು ಹೊಸದೇನಲ್ಲ. ದೇವೆಗೌಡರು ಯಾರನ್ನು ಬೆಳೆಸಿದ್ದಾರೋ ಅವರೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ" ಎಂದು ಹೇಳಿದ್ದಾರೆ.