ಲಕ್ನೋ, ಮಾ.11 (DaijiworldNews/MB) : ಮಹಾಶಿವರಾತ್ರಿಯಾದ ಈ ದಿನ ಇಬ್ಬರು ಶಿವಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಕನ್ವರಿಯಸ್ (ಶಿವ ಭಕ್ತರು) ಗುಂಪಿನ ಭಾಗವಾಗಿದ್ದ ಸುಬೋಧ್ ಕುಮಾರ್ (22) ಮತ್ತು ಅಮರ್ಜೀತ್ (21) ಎಂದು ಗುರುತಿಸಲಾಗಿದೆ.
ಇಬ್ಬರು ಯಾರ್ಥಿಕರು ಉಶೈತ್ನ ಅಟೀನಾ ಗಂಗಾ ಘಾಟ್ಗೆ ಸ್ನಾನ ಮತ್ತು ಪವಿತ್ರ ಜಲ ಸಂಗ್ರಹಿಸಲು ಹೋಗಿದ್ದರು. ಮಹಾಶಿವರಾತ್ರಿ ಹಬ್ಬವಾದ ಇಂದು ಶಿವನಿಗೆ ಪವಿತ್ರ ಜಲವನ್ನು ಅರ್ಪಿಸಲು ಅವರು ಗಂಗಾ ನದಿಯಲ್ಲಿ ಸ್ನಾನಕ್ಕೆ ತೆರಳಿದರು. ಆದರೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಶವವನ್ನು ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಲಾಗಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.