ನವದೆಹಲಿ, ಮಾ10 (DaijiworldNews/MS): ನರೇಂದ್ರ ಮೋದಿ ಸರ್ಕಾರ ಅಂತ್ಯ ಕಾಣುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ರೈತ ಮುಖಂಡ ಮಹೇಂದ್ರ ಸಿಂಗ್ ಅವತ ಪುತ್ರ ನರೇಂದ್ರ ಟಿಕಾಯತ್ ಎಚ್ಚರಿಕೆ ಕೊಟ್ಟಿದ್ದಾರೆ.
ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆಯನ್ನು ನರೇಂದ್ರ ಮೋದಿ ಸರ್ಕಾರದ ಆಡಳಿತಾವಧಿಯ ಕೇವಲ ಮೂರುವರೆ ವರ್ಷಗಳು ಪೂರ್ತಿಗೊಳ್ಳುವವರೆಗೂ ಪ್ರತಿಭಟನೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
1989ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಹುಟ್ಟು ಹಾಕಿರುವ ಭಾರತೀಯ ಕಿಸಾನ್ ಯುನಿಯನ್ನಲ್ಲಿ ನರೇಂದ್ರ ಟಿಕಾಯತ್ ಯಾವುದೇ ಉನ್ನತ ಹುದ್ಧೆಯನ್ನು ಅಲಂಕರಿಸದೆ ತಮ್ಮ ಕುಟುಂಬದಲ್ಲಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ತಮ್ಮ ಅಣ್ಣಂದಿರಿಬ್ಬರು ರೈತರೊಂದಿಗೆ ಹೋರಾಟ ಮಾಡುತ್ತಿದ್ದಾರೆ ಅವರಿಗೆ ಯಾವಾಗಲೂ ಬೆಂಬಲ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಕೃಷಿ ಕಾಯ್ದೆಯ ವಿರುದ್ಧ ಹೋರಾಟ ನಡೆಸಲು ನಮ್ಮ ಕುಂಟುಂಬವೇ ತಯಾರಾಗಿದೆ. ನಾನು ಸಿಸೌಲಿಯಲ್ಲಿ ಕುಟುಂಬದೊಂದಿಗೆ ಕೃಷಿ ಕೆಲಸದಲ್ಲಿ ತಲ್ಲೀನನಾಗಿದ್ದರೂ ನನ್ನ ಮನಸ್ಸು ರೈತರ ಪ್ರತಿಭಟನೆಯಲ್ಲಿರುತ್ತದೆ. ಬಿಡುವಿನ ವೇಳೆಯಲ್ಲಿ ನಾನು ಘಾಜಿಪುರ ಗಡಿಯಲ್ಲಿ ಪ್ರತಿಭಟನೆ ನಿರತರಾಗಿರುವ ರೈತರನ್ನು ಮಾತನಾಡಿಸಿ ಬರುತ್ತಿದ್ದೇನೆ ಎಂದು ನರೇಂದ್ರ ಟಿಕಾಯತ್ ವಿವರಿಸಿದ್ದಾರೆ.