ಬೆಂಗಳೂರು, ಮಾ10 (DaijiworldNews/MS): ಬೆಂಗಳೂರು ಮಹಾನಗರ ಕಾರ್ಯಪಡೆಯ ಪೊಲೀಸ್ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು 3 ದಿನಗಳ ಕಾಲ ಎಸಿಬಿ ವಶಕ್ಕೆ ನೀಡಲಾಗಿದೆ. ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಆರೋಪದಡಿ ಇವರನ್ನು ಬುಧವಾರವಷ್ಟೇ ಎಸಿಬಿ ಬಂಧಿಸಿತ್ತು.. ಬಳಿಕ ಆರೋಪಿ ಅಧಿಕಾರಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಅವರನ್ನು ಮಾರ್ಚ್ 13ರವರೆಗೂ ಪೊಲೀಸ್ ವಶಕ್ಕೆ ನೀಡಲಾಗಿದೆ.
ವಿಕ್ಟರ್ ಸೈಮನ್ ಅವರ ನಿವಾಸ ಹಾಗೂ ಅವರು ಹೊಂದಿದ್ದ ಸ್ಥಳಗಳ ಮೇ. ಮಾ. 9 ರಂದು ಭ್ರಷ್ಟಾಚಾರ ನಿಗ್ರಹ ದಳದ ದಾಳಿ ನಡೆಸಿತ್ತು. ಈ ಸಂದರ್ಭ 1 ಕೋಟಿ ರೂ ಮೌಲ್ಯದ ಬಾಂಡ್ ಪೇಪರ್ ಸೇರಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು. ಇದಲ್ಲದೆ ಎಸಿಬಿಗೆ ಇನ್ನುಒಂದಷ್ಟು ಆಸ್ತಿ ಹೊಂದಿರುವ ಸುಳಿವು ಸಿಕ್ಕಿತ್ತು.
ವಿಕ್ಟರ್ ಸೈಮನ್ ಅವರ ಬಳಿ ಇನ್ನು ಕೆಲ ಆಸ್ತಿಗಳ ಮಾಹಿತಿ ದೊರಕಿದ್ದು, ಒಂದು ಕೋಟಿ ಬಾಂಡ್ ಪೇಪರ್ ಇರಿಸಿಕೊಂಡಿದ್ದರ ಉದ್ದೇಶದ ಕುರಿತು ತನಿಖೆ ನಡೆಯುತ್ತಿದ್ದು , ವಿಕ್ಟರ್ ಸೈಮನ್ ತನಿಖೆಗೆ ಸಹಕರಿಸುತ್ತಿಲ್ಲ. ಈ ಕಾರಣದಿಂದ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್ ಪಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.