ಬೆಂಗಳೂರು, ಮಾ.10 (DaijiworldNews/PY): "ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಹಿರಂಗ ಪ್ರಕರಣದ ತನಿಖೆಯನ್ನು ಗೃಹ ಇಲಾಖೆ ತನಿಖೆಗೆ ಘೋಷಿಸುತ್ತದೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಹಿರಂಗ ಪ್ರಕರಣವನ್ನು ಗೃಹ ಇಲಾಖೆಯು ತನಿಖೆಗೆ ಘೋಷಣೆ ಮಾಡುತ್ತದೆ. ಗೃಹ ಸಚಿವರು ತನಿಖೆಯ ವಿಚಾರದ ಬಗ್ಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಿನ್ನೆ ಈ ವಿಚಾರದ ಬಗ್ಗೆ ಮನವಿ ಸಲ್ಲಿಸಿದ್ದು, ಶೀಘ್ರವೇ ತನಿಖೆ ನಡೆಯಲಿದೆ" ಎಂದಿದ್ದಾರೆ.
ನ್ಯಾಯಾಲಯ ಮೆಟ್ಟಿಲೇರಿದ ಆರು ಸಚಿವರಿಂದ ಉತ್ತರ ಪಡೆಯಲು ಕಾಂಗ್ರೆಸ್ ವಿಧಾನಸಭೆ ಕಲಾಪದಲ್ಲಿ ನಿರಾಕರಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, "ಈ ಬಗ್ಗೆ ತಿರಸ್ಕಾರ ಮಾಡಿದರೆ ಒಳ್ಳೆಯದೇ" ಎಂದು ತಿಳಿಸಿದ್ದಾರೆ.