ಪಿಲಿಭಿತ್ (ಉತ್ತರ ಪ್ರದೇಶ), ಮಾ.10 (DaijiworldNews/MB): ಮೂವರು ಕಿಡಿಗೇಡಿಗಳು 16 ವರ್ಷದ ಬಾಲಕನ ಗುದದ್ವಾರದ ಮೂಲಕ ಪಂಪ್ ಮೂಲಕ ಗಾಳಿ ಹಾಕಿದ್ದು ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ.
ಕಿಡಿಗೇಡಿಗಳು ಪಂಪ್ನಿಂದ ಬಾಲಕನ ಗುದದ್ವಾರದ ಮೂಲಕ ಗಾಳಿ ತುಂಬಿದ್ದು ಬಾಲಕನ ದೇಹದ ಒಳ ಅಂಗಗಳಿಗೆ ಹಾನಿ ಉಂಟಾಗಿದೆ. ಬರೇಲಿಯ ಆಸ್ಪತ್ರೆಯಲ್ಲಿ ಎರಡು ದಿನ ಜೀವನ್ಮರಣ ಹೋರಾಟ ನಡೆಸಿದ ಬಾಲಕ ಕೊನೆಗೆ ಸಾವನ್ನಪ್ಪಿದ್ದಾನೆ.
ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಳಿಕ 22 ರಿಂದ 26 ವರ್ಷದೊಳಗಿನ ಮೂವರು ಯುವಕರ ವಿರುದ್ದ ಪಿಲಿಭಿತ್ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಆರೋಪಿಗಳು ಈ ಕೃತ್ಯ ಎಸಗಲು ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ.
ಬಾಲಕನ ತಂದೆ ನೀಡಿದ ಲಿಖಿತ ದೂರಿನ ಪ್ರಕಾರ, "ಬಾಲಕ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ. ಮಾರ್ಚ್ 4 ರಂದು, ಅವರು ಊಟ ಮಾಡಲು ಹೊರಟಾಗ ಅಮಿತ್, ಸೂರಜ್ ಮತ್ತು ಕಮಲೇಶ್ ಎಂಬ ಮೂವರು ಕಾರ್ಮಿಕರು ನನ್ನ ಮಗನನ್ನು ಹಿಡಿದರು. ಅಮಿತ್ ಮತ್ತು ಸೂರಜ್ ನನ್ನ ಮಗನ ಕೈಗಳನ್ನು ಹಿಡಿದಿದ್ದರೆ, ಕಮಲೇಶ್ ನನ್ನ ಮಗನ ಗುದದ್ವಾರದ ಮೂಕ ಅಕ್ಕಿ ಗಿರಣಿಯ ಏರ್ ಕಂಪ್ರೇಸರ್ ಮೂಲಕ ಗಾಳಿಯನ್ನು ಪಂಪ್ ಮಾಡಿದ್ದಾನೆ'' ಎಂದು ದೂರಿದ್ದಾರೆ.
ಸ್ಥಳೀಯ ವೈದ್ಯರ ಸಲಹೆಯ ಮೇರೆಗೆ ಬಾಲಕನನ್ನು ಪಿಲಿಭಿತ್ನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಅಲ್ಲಿಂದ ವೈದ್ಯರು ಅವನನ್ನು ಬರೇಲಿಯ ಉನ್ನತ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಶನಿವಾರ ಬಾಲಕ ಸಾವನ್ನಪ್ಪಿದ್ದಾನೆ.
"ಮೂವರು ಆರೋಪಿಗಳ ವಿರುದ್ಧ ಸೆಕ್ಷನ್ 304 (ಕೊಲೆಗೆ ಉದ್ದೇಶಿಸದ ನರಹತ್ಯೆ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರು ಆರೋಪಿಗಳಲ್ಲಿ ಇಬ್ಬರನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ" ಎಂದು ಎಸ್ಎಚ್ಒ ಎಸ್.ಕೆ. ಸಿಂಗ್ ಹೇಳಿದ್ದಾರೆ.