ನವದೆಹಲಿ, ಮಾ.09 (DaijiworldNews/HR): ರಾಹುಲ್ ಗಾಂಧಿಯವರು ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ರಚಿಸುವ ಕುರಿತು ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, "ಕಾಂಗ್ರೆಸ್ ನಾಯಕನನ್ನು ಶಾಲೆಗೆ ಕಳುಹಿಸಿ, ಇದರಿಂದಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಯಾವ ಸಚಿವಾಲಯಗಳು ಮತ್ತು ಇಲಾಖೆಗಳು ಅಸ್ತಿತ್ವದಲ್ಲಿರುತ್ತವೆ ಎಂಬುದು ಅವರಿಗೆ ತಿಳಿಯುತ್ತದೆ" ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಪೀಳಿಗೆಯ ನಂತರ ಪೀಳಿಗೆಗೆ ಆಳ್ವಿಕೆ ನಡೆಸಿದವರು, ಮೀನುಗಾರಿಕೆಗೆ ಕೇಂದ್ರದ ಹಂಚಿಕೆಯ ಮೂಲಕ ಕೇವಲ 3,682 ಕೋಟಿ ಮಾತ್ರ ನೀಡಿದ್ದಾರೆ, ಆದರೆ 2014ರಿಂದ ನರೇಂದ್ರ ಮೋದಿ ಸರ್ಕಾರ 32,000 ಕೋಟಿ ನೀಡಿದೆ. ರಾಹುಲ್ ಗಾಂಧಿಯವರ ಹೇಳಿಕೆಗಳಿಂದ ನನಗೆ ನೋವುಂಟಾಗಿದೆ" ಎಂದರು.
ಇನ್ನು ದಯವಿಟ್ಟು ಕಾಂಗ್ರೆಸ್ ನಾಯಕನನ್ನ ಶಾಲೆಗೆ ಕಳುಹಿಸಿ. ಯಾವ ಸಚಿವಾಲಯಗಳು, ಇಲಾಖೆಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಅವರಿಗೆ ಹೇಳಿ, ಇಲ್ಲದಿದ್ದರೆ ಒಕ್ಕೂಟದ ಅಡಿಯಲ್ಲಿ ಯಾವ ಸಚಿವಾಲಯಗಳಿವೆ ಎಂಬುದನ್ನು ಅವರು ಮರೆತುಬಿಡುತ್ತಾರೆ" ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯದ ಅಗತ್ಯತೆಯ ಬಗ್ಗೆ ಮಾತನಾಡಿದ್ದು, ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಲವಾರು ಕೇಂದ್ರ ಸಚಿವರು ಮತ್ತು ಬಿಜೆಪಿ ಮುಖಂಡರು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ಗಮನಸೆಳೆದು ಅಪಹಾಸ್ಯ ಮಾಡಿದ್ದರು.