ಮುಂಬೈ, ಮಾ.09 (DaijiworldNews/PY): ಮಾರ್ಚ್ 13ರಿಂದ 31ರವರೆಗೆ ಥಾಣೆಯ 11 ಹಾಟ್ಸ್ಪಾಟ್ಗಳಲ್ಲಿ ಲಾಕ್ಡೌನ್ ಮಾಡುವುದಾಗಿ ಥಾಣೆ ನಗರಾಡಳಿತ ಮಂಗಳವಾರ ಘೋಷಣೆ ಮಾಡಿದೆ.
ಈ ಆದೇಶವನ್ನು ಥಾಣೆಯ ಮುನ್ಸಿಪಲ್ ಕಮಿಷನರ್ ವಿಪಿನ್ ಶರ್ಮಾ ಅವರ ಜಾರಿಗೊಳಿಸಿದ್ದು, "ಥಾಣೆಯ 11 ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗುತ್ತಿವೆ. ಈ ನಿಟ್ಟಿನಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.
"ಈ ಹಿಂದೆ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ ಸಂದರ್ಭ ಇದ್ದ ಎಲ್ಲಾ ನಿರ್ಬಂಧಗಳು ಮಾರ್ಚ್ 13ರಿಂದ ಪ್ರಾರಂಭವಾಗುವ ಲಾಕ್ಡೌನ್ ವೇಳೆ ಅನ್ವಯವಾಗಲಿದೆ. ಹಾರ್ಟ್ ಸ್ಪಾಟ್ನ ಹೊರವಲಯದಲ್ಲಿ ಕೆಲವು ವಹಿವಾಟುಗಳು ಹಾಗೂ ಚಟುವಟಿಕೆಗಳಿಗೆ ಅನುಮತಿ ಕಲ್ಪಿಸಲಾಗುವುದು" ಎಂದು ಆದೇಶದಲ್ಲಿ ತಿಳಿಸಿದೆ.
"ಕೇಂದ್ರವು ದೇಶದಾದ್ಯಂತ ಲಾಕ್ಡೌನ್ ಹೇರಿದ್ದ ನಿರ್ಬಂಧದಂತೆ ಎಲ್ಲಾ ರೀತಿಯ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗುವುದು. ಉಳಿದಂತೆ ಎಲ್ಲಾ ವ್ಯಾಪಾರ ಸೇರಿದಂತೆ ವಹಿವಾಟು, ಮಾರುಕಟ್ಟೆ ಬಂದ್ ಆಗಲಿದೆ" ಎಂದು ಹೇಳಿದೆ.