ನವದೆಹಲಿ, ಮಾ.09 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಟೂಲ್ ಕಿಟ್ ನ್ನು ಹವಾಮಾನ ಬದಲಾವಣೆ ಹೋರಾಟಗಾರ್ತಿ ದಿಶಾ ರವಿ ಅವರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಆರೋಪ ಎದುರಿಸುತ್ತಿರುವ ನಿಕಿತಾ ಜಾಕೊಬ್ ಮತ್ತು ಶಾಂತನು ಮುಲುಕ್ ಅವರಿಗೆ ಮಾರ್ಚ್ 15ರವರೆಗೂ ಬಂಧನದಿಂದ ರಕ್ಷಣೆಯನ್ನು ಸ್ಥಳೀಯ ನ್ಯಾಯಾಲಯ ವಿಸ್ತರಿಸಿದೆ.
ದೆಹಲಿ ಪೊಲೀಸರಿಗೆ ಪ್ರತಿಕ್ರಿಯಿಸಲು ಸಮಾಯಾವಕಾಶದ ಅಗತ್ಯವಿದೆ ಎಂಬುದಾಗಿ ನಿಕಿತಾ ಜಾಕೊಬ್ ಮತ್ತು ಶಾಂತನು ಮುಲುಕ್ ಅವರ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರಾಗಿ ಮನವಿ ಮಾಡಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ, ರಿಲೀಫ್ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಮಾರ್ಚ್ 15ರವರೆಗೂ ನಿಕಿತಾ ಜಾಕೊಬ್ ಮತ್ತು ಶಾಂತನು ಮುಲುಕ್ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.