ಬೆಂಗಳೂರು, ಮಾ.09 (DaijiworldNews/PY): ಥಣಿಸಂದ್ರದ 16 ಮಸೀದಿಗಳಿಂದ ಶಬ್ದ ಮಾಲಿನ್ಯ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಅಲ್ಲದೇ, ನಗರ ಪೊಲೀಸ್ ಆಯುಕ್ತರಿಗೂ ಕೂಡಾ ನೋಟಿಸ್ ಜಾರಿ ಮಾಡಿದೆ.
ಥಣಿಸಂದ್ರದ 16 ಮಸೀದಿಗಳಿಂದ ಶಬ್ದ ಮಾಲಿನ್ಯ ಆರೋಪಕದಡಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದು, ಸದ್ಯ ಪಿಐಎಲ್ ವಿಚಾರಣೆಯನ್ನು ಎಪ್ರಿಲ್ 15ಕ್ಕೆ ನಿಗದಿಪಡಿಸಿದೆ.
ಮಸೀದಿಗಳಲ್ಲಿ ನಿಯಮಬಾಹಿರವಾಗಿ ಧ್ವನಿವರ್ಧಕದ ಉಪಯೋಗವಾಗುತ್ತಿದೆ. ನಾಗವಾರ ಸೇರಿದಂರೆ ಥಣಿಸಂದ್ರ ಹಾಗೂ ಹೆಚ್ಬಿಆರ್ ಲೇಔಟ್ನ 16 ಮಸೀದಿಗಳಲ್ಲಿ ನಿಯಮಬಾಹಿವಾಗಿ ಧ್ವನಿವರ್ಧಕಗಳನ್ನು ಉಪಯೋಗ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಶಬ್ದ ಮಾಲಿನ್ಯ ತಡೆಗೆ ನಿರ್ದೇಶನ ನೀಡುವಂತೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು.