ಬೆಂಗಳೂರು, ಮಾ 09 (DaijiworldNews/MS): ಬೆಂಗಳೂರು - ಕೇರಳದಿಂದ ಕರ್ನಾಟಕ ಗಡಿ ಪ್ರವೇಶ ನಿರ್ಬಂಧ ಪ್ರಶ್ನಿಸಿ ಕಾಸರಗೋಡಿನ ಸುಬ್ಬಯ್ಯ ಶೆಟ್ಟಿ ಎಂಬುವವರಿಂದ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು ಕೈಗೆತ್ತಿಕೊಂಡಿದೆ.
ಅರ್ಜಿ ವಿಚಾರಣೆ ವಿಚಾರಣೆ ಸಂದರ್ಭ, ರಾಜ್ಯದ ಆದೇಶವೂ ಕೇಂದ್ರ ಸರ್ಕಾರದರದ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಅಭಿಪ್ರಾಯ ವ್ಯಕ್ತಪಡಿಸಿತು.. ಕಾಸರಗೋಡು ಭಾಗದಲ್ಲಿ ನಿರ್ಬಂಧ ವಿಧಿಸಲಾಗಿದೆ. 25 ರಸ್ತೆಗಳ ಪೈಕಿ 4 ರಸ್ತೆಗಳಲ್ಲಿ ಮಾತ್ರ ಪ್ರವೇಶ ನೀಡಿದ್ದಾರೆ. ಯಾವ ಕಾನೂನಿನಡಿ ಈ ರೀತಿಯ ನಿರ್ಬಂಧ ವಿಧಿಸಿದ್ದೀರಿ? ಬೇರೆ ಜಿಲ್ಲೆಗಳ ಮೂಲಕ ಪ್ರವೇಶಕ್ಕೆ ಅವಕಾಶ ನೀಡಿದ್ದೀರಿ. ಕಾಸರಗೋಡು ಜಿಲ್ಲೆಯಿಂದ ಪ್ರವೇಶಕ್ಕೆ ಏಕೆ ನಿರ್ಬಂಧ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನಿಸಿತು.
ಇದೀಗ, ದಕ್ಷಿಣ ಕನ್ನಡ ಡಿಸಿಗೆ ಪ್ರಮಾಣಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಸದ್ಯ, ವಿಚಾರಣೆಯನ್ನು ಮಾರ್ಚ್ 18ಕ್ಕೆ ಮುಂದೂಡಲಾಗಿದೆ.