ನವದೆಹಲಿ, ಮಾ.09 (DaijiworldNews/PY): ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಘಟಕದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆ, ರಾಜಭವನಕ್ಕೆ ಭೇಟಿ ನೀಡಿದ ತ್ರಿವೇಂದ್ರ ಸಿಂಗ್ ಅವರು ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತ್ರಿವೇಂದ್ರ ಸಿಂಗ್ ಅವರು, "ನಾಲ್ಕು ವರ್ಷಗಳ ಕಾಲ ಉತ್ತರಾಖಂಡದ ದೇವ ಭೂಮಿಯಲ್ಲಿ ಸೇವೆ ಮಾಡಲು ಬಿಜೆಪಿ ನೀಡಿದ ಅವಕಾಶ ನನ್ನ ಜೀವನ್ ಸುವರ್ಣಾಕಾಶವಾಗಿದೆ. ನನ್ನನ್ನು ಪಕ್ಷವು ಇಷ್ಟು ದೊಡ್ಡ ಜವಾಬ್ದಾರಿಯಿಂದ ಗೌರವಿಸುತ್ತದೆ ಎಂದು ನಾನಂದುಕೊಂಡಿರಲಿಲ್ಲ" ಎಂದಿದ್ದಾರೆ.
"ಪಕ್ಷದ ಆತಂರಿಕ ಚರ್ಚೆ ನಡೆದಿದೆ ಹಾಗೂ ಈಗ ಬೇರೆಯವರಿಗೆ ಈ ರಾಜ್ಯದ ಜವಾಬ್ದಾರಿಯನ್ನು ನೀಡಬೇಕು ಎನ್ನುವ ಒಮ್ಮತವು ಬಂದಿದೆ. ಈ ನಿಟ್ಟಿನಲ್ಲಿ ನಾನು ರಾಜೀನಾಮೆ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.