ರಾಂಚಿ, ಮಾ.09 (DaijiworldNews/PY): ನದಿ ದಂಡೆಯಲ್ಲಿ ಮಹಿಳೆಯೋರ್ವರ ಶವವನ್ನು ಆರು ತುಂಡುಗಳಾಗಿ ಕತ್ತರಿಸಿ ಎಸೆದಿರುವ ಘಟನೆ ಜಾರ್ಖಡ್ನ ಪಕೂರ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಮಹಿಳೆಯನ್ನು ಸೋನಾ ಮರಂಡಿ (45) ಎಂದು ಗುರುತಿಸಲಾಗಿದೆ.
"ಸೋನಾ ಫೆ.24ರಂದು ಕಾಣೆಯಾಗಿದ್ದಳು. ಈಕೆಯ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ ಹತ್ಯೆಗೈಯಲಾಗಿದೆ. ಮಹಿಳೆಯ ರಕ್ತ ಸಿಕ್ತವಾದ ದೇಹ ಪತ್ತೆಯಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.
ಕತ್ತರಿಸಿ ಬಿದ್ದಿದ್ದ ಕಾಲನ್ನು ಗ್ರಾಮಸ್ಥರು ಗಮನಿಸಿದ್ದು, ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಮಹಿಳೆಯ ತುಂಡು ತುಂಡಾದ ದೇಹ ಪತ್ತೆಯಾಗಿದೆ. ಮಹಿಳೆಯ ಕತ್ತರಿಸಿದ ತಲೆ, ಕೈ ಕಾಲುಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆಯ ಪುತ್ರ ಮನೋಜ್ ಹನ್ಸದ್ ತನ್ನ ತಾಯಿಯ ದೇಹ ಎಂದು ಗುರುತಿಸಿದ್ದು, "ತಾಯಿ ಮಾ.3ರಂದು ಕಾಣೆಯಾಗಿದ್ದರು" ಎಂದು ತಿಳಿಸಿದ್ದಾನೆ.
"ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದ್ದು, ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸುತ್ತೇವೆ" ಎಂದು ಪೊಲೀಸರು ತಿಳಿಸಿದ್ದಾರೆ.