ಬೆಂಗಳೂರು, ಮಾ 09 (DaijiworldNews/MS): ರಾಜಕಾರಣಕ್ಕಾಗಿ ಕೀಳುಮಟ್ಟಕ್ಕೆ ಇಳಿಯಬಾರದು, ರಮೇಶ್ ಜಾರಕಿಹೊಳಿ ಅಮಾಯಕರಾಗಿದ್ದು ಮೊದಲು ಸಿ.ಡಿ ಇವೆ ಎಂದು ಹೇಳಿಕೆ ನೀಡುವವರ ಮೇಲೆ ರಾಜ್ಯ ಸರ್ಕಾರ ಕೇಸ್ ಹಾಕಿ ಬಂಧಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿ.ಡಿ ಅಸಲಿಯೋ, ನಕಲಿಯೋ ಗೊತ್ತಿಲ್ಲ ಆದರೆ ತೇಜೋವಧೆಯಾಗುತ್ತದೆ. ನಾಲ್ಕು ಗೋಡೆ ಮಧ್ಯೆ ನಡೆದಿರುವುದನ್ನು ದಾಖಲಿಸಿ ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಕಾನೂನು ಬಾಹಿರವಲ್ಲವೇ? ಹೀಗಾಗಿ ಸಿ.ಡಿ ಪ್ರಕರಣದಂತಹ ತೇಜೋವಧೆಯಾಗುವುದನ್ನು ತಡೆಯಲು ಯಾವ ಕಾನೂನು ತರುತ್ತಾರೋ ತರಲಿ. ಹೀಗೆ ಮಾಧ್ಯಮಗಳ ಮುಂದೆ ಸಿ.ಡಿ ಇವೆ ಎಂದು ಬ್ಲ್ಯಾಕ್ ಮೇಲ್ ಮಾಡುವವರ ಮೇಲೆ ಮೊದಲು ಕೇಸ್ ಹಾಕಬೇಕು ಎಂದು ಹೇಳಿದ್ದಾರೆ.
ನಾಲ್ಕು ಗೋಡೆ ಮಧ್ಯೆ ನಡೆದಿರುವುದನ್ನು ದಾಖಲಿಸಿ ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಕಾನೂನು ಬಾಹಿರವಲ್ಲವೇ? ಆ ಸಿ.ಡಿ ಅಸಲಿಯೋ, ನಕಲಿಯೋ ಆದರೆ ತೇಜೋವಧೆಯಂತೂ ಆಗಿದೆಯಲ್ಲವೇ? ಸಿ.ಡಿ ಪ್ರಕರಣದಂತಹ ತೇಜೋವಧೆಯಾಗುವುದನ್ನು ತಡೆಯಲು ಏನು ಕಾನೂನು ತರುತ್ತಾರೋ ತರಲಿ. ಸಿಡಿ ಮುಂದಿಟ್ಟುಕೊಂಡು ನಮ್ಮ ಕುಟುಂಬ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವುದಾಗಲಿ ಅಥವಾ ಇನ್ನೊಬ್ಬರ ತೇಜೋವಧೆಗೆ ಯಾವತ್ತೂ ಕೈಹಾಕಿಲ್ಲ. ನಮ್ಮ ತಂದೆಯವರ ಕಾಲದಿಂದಲೂ ಇಂಥ ಕೆಲಸ ಮಾಡಿಲ್ಲ ಎಂದರು.
ನಿಜಕ್ಕೂ ಆ ಹೆಣ್ಣು ಮಗಳು ಸಂತ್ರಸ್ತೆಯಾಗಿದ್ದರೆ, ಕಿರುಕುಳ ನಡೆದಿದ್ದರೆ ಸಮಾಜದ ಮುಂದೆ ಏಕೆ ಬರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆ ಹೆಣ್ಣು ಮಗಳ ವಿಡಿಯೋ ಬಂದಿದೆ. ಹೀಗಾಗಿ ಆಕೆ, ಸಂತ್ರಸ್ತೆಯೋ ಅಥವಾ ನಕಲಿ ಅಂತಿರುವ ರಮೇಶ್ ಜಾರಕಿಹೊಳಿ ಸಂತ್ರಸ್ತರೋ ಎಂದು ಪ್ರಶ್ನಿಸಿದ್ದಾರೆ.