ಕಲಬುರಗಿ, ಮಾ.09 (DaijiworldNews/PY): ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವ್ಯಕ್ತಿಯೋರ್ವ ಹಾಡಹಗಲೇ ದಂತ ವೈದ್ಯರೋರ್ವರಿಗೆ ಚೂರಿ ಇರಿದ ಘಟನೆ ಮಾ.9ರ ಮಂಗಳವಾರದಂದು ನಡೆದಿದೆ.
ಸಾಂದರ್ಭಿಕ ಚಿತ್ರ
ಆರೋಪಿಯನ್ನು ಸುರಪುರ ಮೂಲದ ನಿವಾಸಿ ಶ್ರೀನಿವಾಸ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಾ. ವಿಶ್ವನಾಥ್ ಪಾಟೀಲ್ ಎಂಬವರು ಚೂರಿ ಇರಿತಕ್ಕೆ ಒಳಗಾದ ವೈದ್ಯ. ಡಾ.ವಿಶ್ವನಾಥ್ ಅವರು ಸಿದ್ದಗಂಗಾ ಡೆಂಟಲ್ ಆಸ್ಪತ್ರೆಯನ್ನು ಹೊಂದಿದ್ದಾರೆ. ಈ ಹಿಂದೆ ಶ್ರೀನಿವಾಸ ಡಾ.ವಿಶ್ವನಾಥ್ ಅವರ ಅಸ್ಪತ್ರೆಯಲ್ಲಿ ದಂತ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ.
ವಿಶ್ವನಾಥ್ ಪಾಟೀಲ್ ಅವರು ಮಂಗಳವಾರ ಬೆಳಗ್ಗೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಆಸ್ಪತ್ರೆಯ ಒಳಗೆ ಹೋಗುತ್ತಿದ್ದ ಸಂದರ್ಭ ಆರೋಪಿ ಶ್ರೀನಿವಾಸ ವಿಶ್ವನಾಥ್ ಪಾಟೀಲ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಗಾಯಾಳು ವೈದ್ಯ ವಿಶ್ವನಾಥ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯನ್ನು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.