ನವದೆಹಲಿ, ಮಾ.09 (DaijiworldNews/MB): ಬಿ.ಎಸ್.ಶ್ರೀನಿವಾಸ್ ನೇತೃತ್ವದ ಇಂಡಿಯನ್ ಯೂತ್ ಕಾಂಗ್ರೆಸ್(ಐವೈಸಿ) ಯು ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದೆ.
ಐವೈಸಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ದೆಹಲಿಯಲ್ಲಿ ನಡೆಯುತ್ತಿದ್ದು ಐವೈಸಿ ರಾಹುಲ್ ಗಾಂಧಿಯನ್ನು ಮತ್ತೆ ಕಾಂಗ್ರೆಸ್ನ ಅಧ್ಯಕ್ಷರನ್ನಾಗಿಸಬೇಕೆಂದು ನಿರ್ಣಯ ಅಂಗೀಕರಿಸಿದೆ. ಈ ಹಿಂದೆ ಜನವರಿ 21 ರಂದು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿಸುವ ನಿರ್ಣಯವನ್ನು ಅಂಗೀಕಾರ ಮಾಡಿತ್ತು.
ಕಾಂಗ್ರೆಸ್ ಪಕ್ಷ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಚುನಾವಣೆ ನಡೆಸಿದ್ದು ಪ್ರತಿ ಚುನಾವಣೆಗೂ ಮುನ್ನ ವಿವಿಧ ರಾಜ್ಯ ಘಟಕಗಳು ಗಾಂಧಿಯವರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಕೋರಿ ನಿರ್ಣಯಗಳನ್ನು ಮಂಡಿಸಿದೆ. ಇನ್ನೆರಡು ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷದ ಮುಂದಿನ ಪದಾಧಿಕಾರಿಗಳ ಚುನಾವಣೆ ನಡೆಯಲಿದೆ.