ನವದೆಹಲಿ, ಮಾ.09 (DaijiworldNews/PY): "2.5 ಮುಂಭಾಗದ ಯುದ್ದದ ಹಿಂದಿನ ಅಭ್ಯಾಸವು ಬಳಕೆಯಲ್ಲಿಲ್ಲದ ಕಾರಣ. ಭಾರತವು ಗಡಿ ರಹಿತ ಯುದ್ದಕ್ಕೆ ಸಿದ್ದವಾಗಬೇಕಿದೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಭಾರತೀಯ ಪಡೆಗಳನ್ನು 2.5 ಮುಂಭಾಗದ ಯುದ್ದವನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದ್ದು, ಈಗ ಇದು ಬಳಕೆಯಲ್ಲಿ ಇಲ್ಲ. ನಾವು ಗಡಿ ರಹಿತ ಯುದ್ದಕ್ಕೆ ಸಿದ್ದರಾಗಬೇಕಿದೆ" ಎಂದಿದ್ದಾರೆ.
"ಇದು ಹಿಂದಿನ ಅಭ್ಯಾಸ ಹಾಗೂ ಪರಂಪರೆ ವ್ಯವಸ್ಥೆಗಳ ವಿಚಾರವಲ್ಲ. ಬದಲಾಗಿ, ನಾವು ರಾಷ್ಟ್ರವಾಗಿ ಯೋಚಿಸುವ ಹಾಗೂ ಕಾರ್ಯ ನಿರ್ವಹಿಸುವ ಬಗೆಗಿನ ವಿಧಾನವಾಗಿದೆ" ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸಂಸತ್ತಿನಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು, ಭಾರತದ ಭೂಪ್ರದೇಶದ ಒಂದು ಇಂಚು ಜಾಗ ಕೂಡಾ ಕಳೆದುಹೋಗಿಲ್ಲ ಎಂದು ತಿಳಿಸಿದ್ದರು. ಆದರೆ, ಈ ಬಗ್ಗೆ ಆರೋಪಿಸಿದ್ದ ರಾಹುಲ್ ಗಾಂಧಿ, ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದಿದ್ದರು.