ಮುಂಬೈ, ಮಾ.09 (DaijiworldNews/HR): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ನೂರ್ ಮೊಹಮ್ಮದ್ ಖಾನ್ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟ
ನೂರ್ ಮೊಹಮ್ಮದ್ ಖಾನ್ ಮುಂಬೈ ಸ್ಫೋಟದ ಸಂಚುಕೋರ ಟೈಗರ್ ಮೆಮೊನ್ನ ಆಪ್ತನಾಗಿದ್ದು, ವೃತ್ತಿಯಲ್ಲಿ ಬಿಲ್ಡರ್ ಆಗಿದ್ದ. ತನ್ನ ಗೋದಾಮಿನಲ್ಲಿ 58 ಆರ್ಡಿಎಸ್ ಸ್ಫೋಟಕಗಳನ್ನು ದಾಸ್ತಾನು ಇಟ್ಟುಕೊಂಡಿದ್ದ ಆರೋಪ ಆತನ ಮೇಲಿತ್ತು ಎನ್ನಲಾಗಿದೆ.
ಇನ್ನು ಈ ಕುರಿತು ವಿಚಾರಣೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯವು, 2006ರ ನವೆಂಬರ್ 24ರಂದು ಆತ ದೋಷಿ ಎಂದು ತೀರ್ಪು ನೀಡಿತ್ತು ಹಾಗೂ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಮುಂಬೈ ನಗರದ 12 ಕಡೆಗಳಲ್ಲಿ 1993ರ ಮಾರ್ಚ್ 12ರಂದು ಸಂಭವಿಸಿದ ಸರಣಿ ಸ್ಫೋಟಗಳಲ್ಲಿ ಕನಿಷ್ಠ 257 ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ.