ಬೆಂಗಳೂರು, ಮಾ 09 (DaijiworldNews/MS): ರಮೇಶ್ ಜಾರಕಿಹೊಳಿ ಅವರ ವಿರುದ್ದ ದೂರು ದಾಖಲಾದ ದಿನದಿಂದ ಎಲ್ಲವನ್ನೂ ಗಮನಿಸುತ್ತಿದ್ದೇವೆ. ಜಾರಕಿಹೊಳಿ ಟು ಪ್ಲಸ್, ತ್ರೀ ಪ್ಲಸ್ ಫೋರ್ ಸೂತ್ರ ಇದರ ಹಿಂದೆ ಇದೆ
ವಿಧಾನ ಸೌಧದ ಬಿಎಸಿ ಸಭೆ ಬಳಿಕ ರಮೇಶ್ ಜಾರಕಿಹೊಳಿ ಸಿ.ಡಿ ವಿಚಾರವಾಗಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಅವರು . ಲಾ ಬುಕ್ ನಲ್ಲಿ ಏನಿದೆಯೋ ಅದರ ಪ್ರಕಾರ ನಡೆಯುತ್ತೇವೆ
ಎಲ್ಲ ಆಯಾಮಗಳಲ್ಲೂ ಕೂಡ ವಿಚಾರಣೆ ಮಾಡ್ತೇವೆ ಇದರೊಂದಿಗೆ ಮುಖ್ಯಮಂತ್ರಿಗಳ ಜೊತೆಗೂ ಕೂಡ ಚರ್ಚೆ ಮಾಡಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಜೆಟ್ ಬಳಿಕ ಬಿಸಿಎ ಸಭೆ ಬಹಿಷ್ಕರಿಸಿದ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಸಚಿವರು, ಕಾಂಗ್ರೆಸ್ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ವರ್ತಿಸುತ್ತಿಲ್ಲ. ಅವರ ಈ ನಡತೆ ರಾಜಕೀಯ ಉದ್ದೇಶ ಈಡೇರಿಕೆಗೆ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.