ಬೆಂಗಳೂರು, ಮಾ 09 (DaijiworldNews/MS): ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಶುರು ಮಾಡಿದ್ದಾರೆ. ಮಂಡ್ಯ ಹಾಗೂ ಯಾದಗಿರಿ ಸೇರಿದಂತೆ 11 ಜಿಲ್ಲೆಗಳ 9 ಅಧಿಕಾರಿಗಳಿಗೆ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಭ್ರಷ್ಟಾಚಾರ ವಿರೋಧಿ ದಳದ ಪೊಲೀಸರು 11 ಜಿಲ್ಲೆಗಳ 28 ಸ್ಥಳಗಳಲ್ಲಿ ಶೋಧನಾ ಕಾರ್ಯ ಆರಂಭ ಮಾಡಿದ್ದಾರೆ. ಈಗಾಗಲೇ ಹಲವಾರು ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಮನೆಯಲ್ಲಿರುವ ಅಕ್ರಮ ಸಂಪಾದನೆ, ಚಿನ್ನಾಭರಣ, ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರದ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಕೃಷ್ಣೇಗೌಡ, ಬೆಳಗಾವಿ ವಿಭಾಗ ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಹನಮಂತ ಶಿವಪ್ಪ ಚಿಕ್ಕಣ್ಣನವರ್, ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸೂಪರಿಂಟೆಂಡೆಂಟ್ ಇಂಜಿನಿಯರ್ ಮುನಿಗೋಪಾಲರಾಜು, ಮೈಸೂರು ನಗರ ಯೋಜನೆ ಇಲಾಖೆ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ.ವಡ್ಡರ್, ಮೈಸೂರು ಆರ್ಟಿಒ, ಎಫ್ಡಿಎ ಚೆನ್ನವೀರಪ್ಪ, ಯಾದಗಿರಿ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತರ್, ಬಿಎಂಟಿಎಫ್ ಪೊಲೀಸ್ ಇನ್ಸ್ಪೆಕ್ಟರ್ ವಿಕ್ಟರ್ ಸಿಮೊನ್, ದಾವಣಗೆರೆ ವಿಭಾಗ ಫ್ಯಾಕ್ಟರೀಸ್ ಬಾಯ್ಲರ್ಸ್ ಡೆಪ್ಯುಟಿ ಡೈರೆಕ್ಟರ್ ಕೆ.ಎಂ.ಪ್ರಥಮ್, ಯಲಹಂಕ ವಿಭಾಗ ಬಿಬಿಎಂಪಿ ನಗರ ಯೋಜನೆ ಕಚೇರಿ ಅಸಿಸ್ಟೆಂಟ್ ಡೈರೆಕ್ಟರ್, ಜೂನಿಯರ್ ಇಂಜಿನಿಯರ್ ಕೆ.ಸುಬ್ರಹ್ಮಣ್ಯಂ ಸೇರಿದಂತೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ.