ಬೆಂಗಳೂರು, ಮಾ. 08 (DaijiworldNews/SM): ಸೋಲುವ ಭಯ ಇರುವವರಿಗೆ ಗೆಲುವು ಸಿಗದು ಎಂದು ಗೃಹ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯಾವುದೇ ಕೆಲಸವೇ ಆಗಲಿ, ಶ್ರಮವಹಿಸಬೇಕು. ಸ್ಪರ್ಧೆಯಲ್ಲಿ ಭಾಗಿಯಾಗಬೇಕು. ಸೋಲು-ಗೆಲುವು ಎಲ್ಲಾ ಸಂದರ್ಭದಲ್ಲೂ ಇದ್ದವುಗಳಾಗಿವೆ. ಈ ಹಿನ್ನೆಲೆಯಲ್ಲಿ ಸೋಲಿಗೆ ಹೆದರಬಾರದು. ಯಾರಿಗೆ ಸೋಲುವ ಭಯ ಇರುತ್ತದೆಯೋ? ಅವರು ಗೆಲುವು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಭಯ ಇಲ್ಲದೇ ಮುನ್ನುಗ್ಗಿದರೆ ಗೆಲುವು ಸಿಗುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಈ ಹಿಂದೆ ಮುಂಬಯಿ ಪೊಲೀಸ್ ಅಂದ್ರೆ ಹೆಸರುವಾಸಿ ಆಗಿತ್ತು. ಆದರೆ ಈಗ ಬೆಂಗಳೂರು ಪೊಲೀಸರು ಆ ಸಾಧನೆ ಮಾಡಿದ್ದಾರೆ. ದೇಶದಲ್ಲಿ ಎಲ್ಲರಿಗೂ ಕಠಿಣವಾಗಿದ್ದ ಪ್ರಕರಣಗಳನ್ನು ನಮ್ಮ ಪೊಲೀಸರು ಪತ್ತೆ ಹಚ್ಚುತ್ತಿದ್ದು ಹೆಮ್ಮೆಯ ವಿಚಾರ ಎಂದರು.