ಕೋಲ್ಕತ್ತ, ಮಾ.08 (DaijiworldNews/HR): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಪ್ರಕಟಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, "ದೇಶದ ಹೆಸರನ್ನು ನರೇಂದ್ರ ಮೋದಿ ಎಂಬುದಾಗಿ ಬದಲಾಯಿಸುವ ದಿನಗಳು ದೂರ ಇಲ್ಲ" ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಹೆಸರು ಇಡಲಾಗಿದೆ, ಜೊತೆಗೆ ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಕೂಡ ಅವರ ಚಿತ್ರಗಳನ್ನು ಹಾಕಾಲಾಗಿದ್ದು, ಈ ದೇಶಕ್ಕೆ ಅವರ ಹೆಸರು ಇಟ್ಟರೂ ಆಶ್ಚರ್ಯ ಇಲ್ಲ" ಎಂದರು.
ಇನ್ನು "ಪ್ರಧಾನಿ ಮೋದಿ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಹೇಳಿ ಸರ್ಕಾರದ ಕುರಿತು ದ್ವೇಷ ಹರಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಎಲ್ಲ 294 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ನನ್ನ ನಡುವೆಯೇ ಸ್ಪರ್ಧೆ ಇರಲಿದ್ದು, ನಮ್ಮ ಪಕ್ಷ ಬಹುಮತ ಪಡೆದು ಮತ್ತೆ ಅಧಿಕಾರದ ಪಡೆಯಲಿದೆ" ಎಂದು ಹೇಳಿದ್ದಾರೆ.