ಬೆಂಗಳೂರು, ಮಾ.08 (DaijiworldNews/HR): ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಿರುವುದು ಹಾಗೂ ಇಂಧನ ತೈಲಗಳ ಮೇಲಿನ ತೆರಿಗೆ ಕಡಿತಗೊಳಿಸದ ಬೋಗಸ್ ಬಜೆಟ್ ಮಂಡನೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಪ್ರಸ್ತುತ ಜನಸಾಮಾನ್ಯರನ್ನ ಹೈರಾಣಾಗಿಸಿದ್ದು ಬೆಲೆ ಏರಿಕೆ ಎನ್ನುವ ಭೂತ. ಬಜೆಟ್ನಲ್ಲಿ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಿರುವುದು ಹಾಗೂ ಇಂಧನ ತೈಲಗಳ ಮೇಲಿನ ತೆರಿಗೆ ಕಡಿತಗೊಳಿಸದಿರುವುದು ಸರ್ಕಾರದ ಜನವಿರೋಧಿ ಧೋರಣೆಯನ್ನು ಅನಾವರಣಗೊಳಿಸಿದ್ದು ಇದೊಂದು ಬೋಗಸ್ ಬಜೆಟ್" ಎಂದಿದೆ.
ಇನ್ನು ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದ ಅನುತ್ಪಾದಕ ಹಸುಗಳು ರೈತರಿಗೆ ಹೊರೆಯಾಗಿದ್ದು, ಜಾನುವಾರುಗಳು ಆಶ್ರಯ, ಆಹಾರವಿಲ್ಲದೆ ಅನಾಥವಾಗಿವೆ. ಕಾಯ್ದೆಯಿಂದಾದ ಅಸಮತೋಲನ ಸರಿದೂಗಿಸಲು ಯೋಜನೆ ಮತ್ತು ಅನುದಾನ ನೀಡದೆ "ರೈತರು" ಹಾಗೂ "ಗೋಮಾತೆ" ಇಬ್ಬರಿಗೂ ಜಿನೆಪಿ ಸರ್ಕಾರ ದ್ರೋಹವೆಸಗಿದೆ" ಎಂದು ಟ್ವೀಟ್ ಮಾಡಿದೆ.