ಬೆಂಗಳೂರು, ಮಾ.08 (DaijiworldNews/HR): "ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್ ನಿರಾಶೆಯಿಂದ ಕೂಡಿದ್ದು, ಈ ಬಜೆಟ್ಗೆ ದಿಕ್ಕು ದೆಸೆ ಏನೂ ಇಲ್ಲ" ಎಂದು ಜೆಡಿಎಸ್ ಮುಖಂಡ, ಶಾಸಕ ಬಂಡೆಪ್ಪ ಕಾಶಂಪೂರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಜೆಟ್ನಲ್ಲಿ ರೈತರಿಗೆ ಸಾಕಷ್ಟು ಕೊಡಗೆ ಕೊಡಬಹುದೆಂದು ನೀರಿಕ್ಷೆ ಇಟ್ಟುಕೊಂಡಿದ್ದೆವು, ಆದರೆ ಬಜೆಟ್ನಿಂದ ರೈತರಿಗೆ ಉಪಯೋಗಿವಿಲ್ಲ. ಯಾವುದೇ ವರ್ಗದ ಬಡ ಜನರಿಗೆ ಏನೂ ಉಪಯೋಗವಿಲ್ಲ" ಎಂದರು.
ಇನ್ನು ಯುವಕರಿಗೆ ಏನೂ ಪ್ರೋತ್ಸಾಹ ಕೊಡುವ ಯೋಜನೆಗಳು ಬಜೆಟ್ನಲ್ಲಿ ಇಲ್ಲ, ಜೊತೆಗೆ ಪೆಟ್ರೋಲ್, ಡೀಸಲ್ ತೆರಿಗೆ ಕಡಿಮೆ ಮಾಡಬೇಕಿತ್ತು, ತೆರಿಗೆ ಕಡಿಮೆ ಮಾಡುವ ಮೂಲಕ ದರ ಕಡಿಮೆ ಮಾಡಬೇಕಿತ್ತು, ಆದರೆ ಮಾಡಿಲ್ಲ" ಎಂದು ಹೇಳಿದ್ದಾರೆ.