ಬೆಂಗಳೂರು, ಮಾ.08 (DaijiworldNews/HR): "ಸಿಎಂ ಯಡಿಯೂರಪ್ಪ ಇಂದು ಮಂಡಿಸಿರುವ ಬಜೆಟ್ ಯಾವುದೇ ನಿರ್ದಿಷ್ಟ ಗುರಿ, ಕಾರಣ ಇಲ್ಲದಿದ್ದು, ಇದು ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್ ಆಗಿದೆ" ಎಂದು ಮಾಜಿ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮುಖ್ಯಮಂತ್ರಿಗಳು ಹಸಿರು ಶಾಲು ಹಾಕಿ ಬಜೆಟ್ ಮಂಡಿಸಿದ್ದಾರೆ. ಆದರೆ ರೈತರಿಗೆ ಅನುಕೂಲವಾಗುವ ಯಾವುದೇ ಯೋಜನೆ ಕಾಣುತ್ತಿಲ್ಲ. ಇಡೀ ದೇಶದಲ್ಲಿ ಕೃಷಿ ತಿದ್ದುಪಡಿಯನ್ನು ವಿರೋಧಿಸುತ್ತಿದ್ದಾರೆ. ಕೃಷಿ, ನಿರಾವರಿಗೆ ಯಾವುದೇ ಯೋಜನೆ ಕಾಣುತ್ತಿಲ್ಲ" ಎಂದರು.
ಇನ್ನು "ಅಂಬೇಡ್ಕರ್, ಜಗಜೀವನ್ ಸೇರಿದಂತೆ ಕೆಲ ಕಾರ್ಪೊರೇಷನ್ಗಳಿಗೆ 500 ಕೋಟಿ ರೂ. ನೀಡಿದ್ದ್ದು, ಇದು ಯಾವ ಪುರುಷಾರ್ಥಕ್ಕೆ ಘೋಷಿಸಬೇಕು. ಕಳೆದ ಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿ, ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ದಾವೋಸ್ಗೆ ತೆರಳಿ ಹೂಡಿಕೆದಾರರನ್ನ ಕರೆದುಕೊಂಡು ಬರೋದಾಗಿ ಹೇಳಿದರು. ಯಾರನ್ನೂ ಸಹ ಕರೆತಂದಿಲ್ಲ" ಎಂದು ಹೇಳಿದ್ದಾರೆ.