ಬೆಂಗಳೂರು, ಮಾ.08 (DaijiworldNews/HR): 2021-22ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯದಿಯೂರಪ್ಪ ಅವರು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.
ಅಡಿಕೆ ಬೆಳೆಗಾರರು ಬಾದಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಿಸಲು, ಹಸಿರೆಲೆ ಗೊಬ್ಬರಕ್ಕೆ 10 ಕೋಟಿ, ಸಾವಯವ, ಸಿರಿಧಾನ್ಯ ಮಾರಾಟಕ್ಕೆ ಇ ಮಾರುಕಟ್ಟೆ ಪ್ರೈ. ಲಿಮಿಟೆಡ್, ಅಡಕೆ ಪರಿಹಾರ ಬೆಲೆ ಪ್ರೋತ್ಸಾಹಕ್ಕೆ 25 ಕೋಟಿ ರೂಪಾಯಿ ಅನ್ನು ಘೋಷಿಸಿದ್ದಾರೆ. 25 ಕೋಟಿ ಘೋಷಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮಾರುಕಟ್ಟೆ ಶುಲ್ಕವನ್ನು ಶೇ.1.5 ರಿಂದ ಶೇ.0.60ಗೆ ಇಳಿಸಲಾಗಿದ್ದು, ಕೃಷಿ ಉತ್ಪನ್ನ ಸಂಗ್ರಹಣ ಹಾಗೂ ಸಂಸ್ಕರಣೆಗೆ ಆದ್ಯತೆ ನೀಡಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ಇನ್ನು ದೇಸಿ ತಳಿಗಳಾದ ಘೀರ್, ಸಾಹಿವಾಲ್, ವಂಗೋಲ್, ದೇವಣಿ ತಳಿಗಳ ಅಭಿವೃದ್ಧಿಗೆ ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ ಕೈಗೊಳ್ಳಲಾಗಿದ್ದು, ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನಾ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಆಕಸ್ಮಿಕ ಮರಣಹೊಂದು ಕುರಿ ಪರಿಹಾರಕ್ಕೆ ಅನುಗ್ರಹ ಕೊಡುಗೆ ಮುಂದುವರಿಕೆ ಮಾಡಲಾಗುತ್ತಿದೆ. ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನಲ್ಲಿ ಆಯುರ್ವೇದ ಔಷಧಿ ಅಳವಡಿಗೆ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ಔಷಧಿ ಅಳವಡಿಕೆ ಕೇಂದ್ರ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ ಎಂಬುದಾಗಿ ಘೋಷಿಸಿದರು.
ಕೃಷಿ ಯಾಂತ್ರಿಕರನ ಯೋಜನೆಯದಿ, ಸಣ್ಣ ಟ್ರಾಕ್ಟರ್ಗಳಿಗೆ ನೀಡುತ್ತಿದ್ದ ಸಹಾಯಧನ 24-45 ಪಿಟಿಓ ಎಚ್ಪಿ ಟ್ರಾಕ್ಟರ್ಗಳಿಗೆ ವಿಸ್ತರಣೆ ಮಾಡಲಾಗಿದೆ.
ಇನ್ನು ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು ಹಂಪಲು, ತರಕಾರಿ ಮತ್ತು ಸಾಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪಿಸಲಾಗಿದೆ.