ಮಡಿಕೇರಿ, ಮಾ 08 (DaijiworldNews/MS): ಮಡಿಕೇರಿಯಲ್ಲಿ ನರಭಕ್ಷಕ ಹುಲಿ ಮತ್ತೆ ದಾಳಿ ನಡೆಸಿದ್ದು, ಓರ್ವ ಬಾಲಕನನ್ನು ಕೊಂದುಹಾಕಿದೆ. ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದ್ದು, ಎಂಟು ವರ್ಷ ಪ್ರಾಯದ ಬಾಲಕ ರಂಗಸ್ವಾಮಿಯನ್ನು ಹುಲಿ ಕೊಂದು ಹಾಕಿದೆ. ಆತನ ಅಜ್ಜ ಕೆಂಚ (52 ) ಗಂಭೀರ ಗಾಯಗೊಂಡಿದ್ದಾರೆ.
ಮಡಿಕೇರಿಯಲ್ಲಿ ಹುಲಿ ಕಾಟ ಜೋರಾಗಿದ್ದು , ಕಳೆದ 16 ದಿನಗಳಲ್ಲಿ ಹುಲಿ ದಾಳಿಗೆ ಮೂವರು ವ್ಯಕ್ತಿಗಳು ಮತ್ತು 12 ಹಸುಗಳು ಬಲಿಯಾಗಿದ್ದು, ಇದೀಗ ಬಾಲಕನೊಬ್ಬನನ್ನು ಹುಲಿ ಕೊಂದು ಹಾಕಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಗೊಂಡ ಕೆಂಚ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.