ರಾಯಚೂರು,ಮಾ.08 (DaijiworldNews/HR): ಮಾಜಿ ಶಾಸಕರ ಮೊಮ್ಮಕ್ಕಳಿಬ್ಬರು ರವಿವಾರದಂದು ನಾಪತ್ತೆಯಾಗಿದ್ದು, ಸೋಮವಾರ ಬೆಳಗ್ಗೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟ ಮಕ್ಕಳನ್ನು ವರುಣ್ (9) ಹಾಗೂ ಸಣ್ಣಯ್ಯ (5) ಎಂದು ಗುರುತಿಸಲಾಗಿದೆ.
ಮಾನ್ವಿ ತಾಲೂಕಿನ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಇಬ್ಬರು ಮೊಮ್ಮಕ್ಕಳು ರವಿವಾರ ಮಧ್ಯಾಹ್ನ ಆಟವಾಡುತ್ತಿರುವಾಗ ನಾಪತ್ತೆಯಾಗಿದ್ದರು.
ನಿನ್ನೆಯಿಂದ ಸಿರವಾರ ಹಾಗೂ ಕವಿತಾಳ ಪೋಲೀಸರು ತೀವ್ರ ಹುಡುಕಾಟ ನಡೆಸಿದ್ದು, ಇಂದು ಬೆಳಗ್ಗೆ ಬಾಲಕರಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಿರವಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.