ಬೆಂಗಳೂರು, ಮಾ 08 (DaijiworldNews/MS): ಬಿಜೆಪಿಗೆ ಹಾಗೂ ಜಾರಕಿಹೊಳಿ ಕುಟುಂಬಕ್ಕೆ ಮಸಿ ಬಳಿಯುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಸಿಡಿ ಸಂಚು ರೂಪಿಸಲಾಗಿದ್ದು, ಇದಕ್ಕಾಗಿ ರೂ.15 ಕೋಟಿ ಖರ್ಚು ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿಯವರು ಆರೋಪಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ, ಪಾಂಡಿಚೆರಿ, ತಮಿಳುನಾಡು, ಕೇರಳ ಅಸ್ಸಾಂ ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಈ ಸಂಚು ರೂಪಿಸಲಾಗಿದೆ. ಸಹೋದರನ ವಿರುದ್ಧ ಯುವತಿಯ ಲೈಂಗಿಕ ದುರ್ಬಳಕೆ ಆರೋಪದ ಸಿಡಿ ನಕಲಿಯಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಹನಿಟ್ರಾಪ್ ಮಾಡುವ ವ್ಯವಸ್ಥಿತ ತಂಡವಿದೆ. ಪೊಲೀಸರು ಈಗಾಗಲೇ ಯುವತಿಯರು ಕೆಲವು ಗ್ಯಾಂಗ್ನ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ಪ್ರಗತಿಯಲ್ಲಿರುವುದರಿಂದ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ. ರಾಜಕೀಯ ಮಾತ್ರವಲ್ಲದೆ ಇತರ ಹಲವು ಕ್ಷೇತ್ರಗಳೂ ಇದರ ಹಿಂದೆ ಇದ್ದಾರೆ.
ಹನಿಟ್ರಾಪ್ನಲ್ಲಿ ವಿಫಲ ಪ್ರಯತ್ನದ ನಂತರ, 17 ಸರ್ವರ್ಗಳಲ್ಲಿ ವೀಡಿಯೊ ಅಪ್ಲೋಡ್ ಮಾಡಲು ಹಾಗೂ ರಷ್ಯಾದಿಂದ ನಕಲಿ ವೀಡಿಯೊವನ್ನು ಬಿಡುಗಡೆ ಮಾಡಲು ಸುಮಾರು 15 ಕೋಟಿ ರೂ ಕೃತ್ಯಕ್ಕೆ ಬಳಸಲಾಗಿದೆ ಎಂಬ ಮಾಹಿತಿಯಿದೆ. ಅಲ್ಲದೆ, ದುಬೈನಲ್ಲಿ ಯುವತಿಗೆ ಉದ್ಯೋಗ ಆಮಿಷ ವನ್ನು ತೋರಿ ರೂ.50 ಲಕ್ಷ ಹಣದ ನೀಡಿ ಕೃತ್ಯಕ್ಕೆ ಬಳಸಲಾಗಿದೆ.
ಅಧಿಕಾರದಲ್ಲಿರುವವರನ್ನು ಕೆಳಕ್ಕುರುಳಿಸಲು ಸಂಚು ರೂಪಿಸುವುದು ಇದೇ ಮೊದಲೇನಲ್ಲ. ಜಾರಕಿಹೊಳಿ ಇದರಿಂದ ಹೊರ ಬಂದು ದೂರು ಸಲ್ಲಿಸಲಿ ಆ ಬಳಿಕ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದರು.