ಗಾಝಿಯಾಬಾದ್, ಮಾ.08 (DaijiworldNews/HR): ದುರ್ನಡತೆಯ ಕಾರಣಕ್ಕಾಗಿ ತನ್ನನ್ನು ಬೈದ ಶಿಕ್ಷಕನನ್ನು 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಗಾಝಿಯಾಬಾದ್ನ ಸರಸ್ವತಿ ವಿಹಾರ ಕಾಲನಿಯಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ತರಗತಿ ಮುಗಿಸಿ ಮೋಟರ್ ಸೈಕಲ್ನಲ್ಲಿ ತೆರಳುತ್ತಿದ್ದ ಶಿಕ್ಷಕ ಸಚಿನ್ ತ್ಯಾಗಿಯತ್ತ ವಿದ್ಯಾರ್ಥಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಬೇರೆ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸದಂತೆ ಶಿಕ್ಷಕ ಈ ವಿದ್ಯಾರ್ಥಿಗೆ ಬುದ್ಧಿ ಹೇಳಿದ್ದು,ಇದರಿಂದ ಅವಮಾನಿತನಾದ ವಿದ್ಯಾರ್ಥಿ ದ್ವೇಷ ಸಾಧಿಸಿ ಗುಂಡು ಹಾರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇರಾಜ್ ರಾಜಾ ತಿಳಿಸಿದ್ದಾರೆ.
ಇನ್ನು ಇತರ ಮೂವರರೊಂದಿಗೆ ಸೇರಿ ಈ ಕೃತ್ಯ ನಡೆಸಿದ್ದು, ನಾಲ್ವರನ್ನೂ ಸಿಸಿಟಿವಿ ತುಣುಕಿನ ಆಧಾರದಲ್ಲಿ ಪತ್ತೆ ಮಾಡಲಾಗಿದೆ.