ಹೊಸದಿಲ್ಲಿ, ಮಾ.08 (DaijiworldNews/HR): ಇಸ್ರೋ ಸಂಸ್ಥೆ ಮಾ. 28ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಐಸ್ಯಾ ಟ್-1 ಉಪಗ್ರಹವನ್ನು ಉಡಾವಣೆ ಮಾಡಲಿದ್ದು, ಇದರ ಮೂಲಕ ದೇಶದ ಗಡಿಯಲ್ಲಿ ಕಣ್ಗಾವಲು ಇಡಬಹುದಾಗಿದ್ದು, ನೈಸರ್ಗಿಕ ವಿಕೋಪಗಳಂತ ಸಂದರ್ಭದಲ್ಲೂ ಮುನ್ಸೂಚನೆ ನೀಡಲು ಇದು ಸಹಕಾರಿಯಾಗಲಿದೆ ಎಂದು ತಿಳಿದು ಬಂದಿದೆ.
ಇಸ್ರೋ ಅಧ್ಯಕ್ಷ ಕೆ ಶಿವನ್
ಇಸ್ರೋದ ಜಿಐಸ್ಯಾಟ್-1 ಉಪಗ್ರಹ ಭಾರತದ ಗಡಿ ಮೇಲೆ ಹದ್ದಿನ ಕಣ್ಣಿಡಲಿದೆ ಎಂಬುದು ಸಂಸ್ಥೆಯ ಅಧಿಕಾರಿಗಳ ಅಭಿಪ್ರಾಯವಾಗಿದ್ದು, ಇದು ಹೈ ರೆಸಲ್ಯೂಶನ್ ಕೆಮರಾಗಳನ್ನು ಹೊಂದಿದ್ದು, ದೇಶದ ಮೂಲೆ ಮೂಲೆಯ ಮೇಲೂ ಕಣ್ಣಿಡಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಇನ್ನು ಈ ಉಪಗ್ರಹವು ರಿಯಲ್ ಟೈಮ್ನಲ್ಲಿ ವಿಶಾಲವಾದ ಭೂಭಾಗದ ದೃಶ್ಯ ಸೆರೆಹಿಡಿದು ನಿರ್ದಿಷ್ಟ ಪ್ರದೇಶದಲ್ಲಿ ಉಂಟಾಗುವ ವ್ಯತ್ಯಾಸಗಳ ಬಗ್ಗೆ ಕೂಡ ಮುನ್ಸೂಚನೆಯನ್ನೂ ನೀಡಲಿದೆ ಎಂದು ತಿಳಿದು ಬಂದಿದೆ.
ಈ ಉಪಗ್ರಹವು 2020ರ ಮಾರ್ಚ್ 5ರಂದೇ ಈ ಉಡಾವಣೆಯಾಗಬೇಕಾಗಿತ್ತು, ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಮುಂದೂಡಿಕೆಯಾಗಿ ಮಾರ್ಚ್ 28ರಂದು ಉಡಾವಣೆಯಾಗಲಿದೆ.