ನವದೆಹಲಿ, ಮಾ.08 (DaijiworldNews/MB): ಜಗತ್ತಿನಾದ್ಯಂತ ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ನಾರಿಶಕ್ತಿಗೆ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ''ಅಂತರರಾಷ್ಟ್ರೀಯ ಮಹಿಳಾ ದಿನದಂದು ನಮ್ಮ ಅದಮ್ಯ ನಾರಿಶಕ್ತಿಗೆ ನಮನ. ನಮ್ಮ ರಾಷ್ಟ್ರದ ಮಹಿಳೆಯರು ಮಾಡಿರುವ ಸಾಧನೆಗೆ ಭಾರತ ಹೆಮ್ಮೆ ಪಡುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಪಡೆದಿರುವ ನಮ್ಮ ಸರ್ಕಾರದ ಗೌರವವಾಗಿದೆ'' ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ''ಮಹಿಳೆಯರು ಇತಿಹಾಸ ಮತ್ತು ಭವಿಷ್ಯವನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ನಿಮ್ಮನ್ನು ತಡೆಯಲು ಯಾರಿಗೂ ಬಿಡಬೇಡಿ'' ಎಂದು ಟ್ವೀಟ್ ಮೂಲಕ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.
ಇನ್ನು ಹಲವು ನಾಯಕರು ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಶುಭಕೋರಿ ಮಹಿಳಾ ಶಕ್ತಿಯನ್ನು ಸ್ಮರಿಸಿದ್ದಾರೆ.