ಮುಂಬೈ, ಮಾ.07 (DaijiworldNews/HR): ಕೊರೊನಾದಿಂದಾಗಿ ಕುಸಿದ ಆರ್ಥಿಕತೆಯ ನಡುವೆಯೇ ಮಹಾರಾಷ್ಟ್ರದ ಮಹಾವಿಕಾಸ್ ಆಘಾಡಿ (ಎಂವಿಎ) ಸರ್ಕಾರ ಮಾರ್ಚ್ 8ರಂದು ತನ್ನ ಎರಡನೇ ಬಜೆಟ್ ಮಂಡಿಸಲಿದೆ ಎಂದು ತಿಳಿದು ಬಂದಿದೆ.
ಉಪ ಮುಖ್ಯಮಂತ್ರಿ ಆಗಿರುವ ಹಣಕಾಸು ಸಚಿವ ಅಜಿತ್ ಪವಾರ್ ಬಜೆಟ್ ಮಂಡಿಸಲಿದ್ದು, ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ದರಗಳು ಹೆಚ್ಚುತ್ತಿರುವ ಈ ಸಮಯದಲ್ಲಿ, ಜನರಿಗೆ ಯಾವ ರೀತಿಯ ಪರಿಹಾರ ನೀಡುವರು ಎಂಬ ನಿರೀಕ್ಷೆಯ ಅವರ ಮೇಲೆ ಇದೆ ಎನ್ನಲಾಗಿದೆ.
ಇನ್ನು ರಾಜ್ಯದ ಆರ್ಥಿಕತೆ ಬೆಳವಣಿಗೆ ಶೇ (-) 8ರಷ್ಟು ಇರಲಿದ್ದು, ಕೃಷಿ ಕ್ಷೇತ್ರದ ಪ್ರಗತಿ ದರ ಶೇ 11.7ರಷ್ಟು ಇರಲಿದ್ದರೆ, ಕೈಗಾರಿಕೆ ಕ್ಷೇತ್ರದ ಬೆಳವಣಿಗೆ ಶೇ (-) 11.3, ಸೇವಾ ಕ್ಷೇತ್ರದ ಪ್ರಗತಿ ಶೇ (-) 9ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.