ಕೋಲ್ಕತ್ತಾ, ಮಾ.07 (DaijiworldNews/PY): "ಬಿಜೆಪಿ ಹಣ ನೀಡಿದರೆ ತೆಗೆದುಕೊಳ್ಳಿ, ಆದರೆ, ಮತ ಮಾತ್ರ ಟಿಎಂಸಿಗೆ ಹಾಕಿ" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ರವಿವಾರ ಸಿಲಿಗುರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ಹೋರಾಟಕ್ಕೆ ಸಿದ್ದ. ಬಿಜೆಪಿ ಮತಕ್ಕಾಗಿ ಹಣ ನೀಡಿದರೆ ತೆಗೆದುಕೊಳ್ಳಿ, ಮತ ಮಾತ್ರ ಟಿಎಂಸಿಗೆ ಹಾಕಿ" ಎಂದು ಹೇಳಿದ್ದಾರೆ.
"ಇನ್ನು ಬದಲಾವಣೆ ದೆಹಲಿಯಲ್ಲಿ ನಡೆಯುತ್ತದೆ. ಪಶ್ಚಿಮ ಬಂಗಾಳದಲ್ಲಿ ಅಲ್ಲ. ಪ್ರಧಾನಿ ಮೋದಿ ಅವರು ಬಂಗಾಳದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ ಎಂದು ಹೇಳುವ ಮುನ್ನ ಯುಪಿ, ಬಿಹಾರ ಹಾಗೂ ಇತರ ರಾಜ್ಯಗಳನ್ನು ನೋಡಲಿ. ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ" ಎಂದು ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.
ಎಲ್ಪಿಜಿ ಸಿಲಿಂಡರ್ ದರ ಏರಿಕೆ ಖಂಡಿಸಿ ಮಮತಾ ಬ್ಯಾನರ್ಜಿ ಅವರು ರವಿವಾರ ಸಿಲಿಗುರಿ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿದರು. ಈ ಸಂದರ್ಭ ಮಹಿಳೆಯರು ಕೆಂಪು ಬಣ್ಣದ ಬಾವುಟ ಹಿಡಿದು ಬೆಂಬಲ ಸೂಚಿಸಿದ್ದಾರೆ.