ಬೆಂಗಳೂರು, ಮಾ.07 (DaijiworldNews/PY): ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಟ್ವಿಟ್ಟರ್ ಕದನ ಆರಂಭವಾಗಿದೆ.
"ರಾಜ್ಯದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಒಂದೆಡೆಯಾದರೆ, ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಾದ ಸ್ಥಾನದಲ್ಲಿರುವ ಸರ್ಕಾರದ ಶಾಸಕರ ಹಾಗೂ ಸಚಿವರು ಇನ್ನೊಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ರಾಜ್ಯದಲ್ಲಿರುವ ಸಮಸ್ಯೆಗಳುನಿರುದ್ಯೋಗ, ವೇತನ, ಶಿಕ್ಷಣ, ಬೆಲೆ ಏರಿಕೆ, ಬಜೆಟ್ ಕೊರತೆ, ಅನುದಾನ ಕಡಿತ, ಹಸಿವು. ಬಿಜೆಪಿ ನೇತೃತ್ವದ ಸರ್ಕಾರದಲ್ಲಿನ ಸಮಸ್ಯೆಗಳು, ಆಂತರಿಕ ಕಿತ್ತಾಟ, ಲೂಟಿಗೆ ಪೈಪೋಟಿ, ಸಂಪುಟ ಸಂಕಟ, ಸಿಡಿ ಕರ್ಮಕಾಂಡ, ಸಚಿವರಿಗೆ ಸಿಡಿ ಆತಂಕ, ಬ್ಲಾಕ್ಮೇಲ್ ಜನತೆಯನ್ನ ಕೇಳೋರಿಲ್ಲವಾಗಿದೆ!" ಎಂದು ಛೇಡಿಸಿದೆ.