ಬೆಂಗಳೂರು, ಮಾ.07 (DaijiworldNews/HR): "ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಅಡ್ವಾಣಿ, ಹಿರಿಯ ಮುಖಂಡ ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇವರು ಯಾರು ಕೂಡ ಪರಸ್ಪರ ಸಂಬಂಧಿಕರಲ್ಲ. ಬಿಜೆಪಿ ಕೇವಲ ಕುಟುಂಬ, ಪರಸ್ಪರ ಸಂಬಂಧಿಕರಿಗೆ ಸೀಮಿತವಾದ ಪಕ್ಷವಲ್ಲ. ಅದು ಸರ್ವವ್ಯಾಪಿಯಾಗಿ ಮತ್ತು ಸರ್ವಸ್ಪರ್ಶಿಯಾಗಿ ಬೆಳೆದಿದೆ" ಎಂದು ಸಚಿವ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವೈಚಾರಿಕ ಚಿಂತನೆ, ರಾಷ್ಟ್ರೀಯವಾದಕ್ಕೆ ನಮ್ಮ ಪಕ್ಷದಲ್ಲಿ ಮಹತ್ವ ನೀಡಲಾಗುತ್ತದೆ" ಎಂದರು.
ಇನ್ನು "ಪಕ್ಷದ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವಾಗ ಪ್ರಬಲವಾಗಿ ವಿಚಾರ ಮಂಡನೆ ನಮ್ಮದಾಗಿರಬೇಕು, ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಬೇಕು. ಕೇವಲ ಸುದ್ದಿಗಾಗಿ ಅನ್ಯ ಮಾರ್ಗ ಬಳಸಿಕೊಳ್ಳಬಾರದು" ಎಂದು ಹೇಳಿದ್ದಾರೆ.