ಬೆಂಗಳೂರು, ಮಾ.07 (DaijiworldNews/PY): "ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿದ 5 ಕೋಟಿ. ರೂ. ಡೀಲ್ ಆರೋಪದಿಂದ ನಾನು ನೊಂದಿದ್ದೆನೆ. ಈ ಹಿನ್ನೆಲೆ ನಾನು ದೂರನ್ನು ವಾಪಾಸ್ ಪಡೆದಿದ್ದೇನೆ" ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
"ಕುಮಾರಸ್ವಾಮಿ ಅವರು ನನ್ನ ಮೇಲೆ 5 ಕೋಟಿಯ ಆರೋಪವನ್ನು ಹೊರಿಸಿದ್ದಾರೆ. ಈ ಆರೋಪದಿಂದ ನಾನು ಹೊರಗೆ ಬರಬೇಕು. ಐದು ಕೋಟಿ ಡೀಲ್ ಬಗ್ಗೆ ಸೂಕ್ತವಾದ ತನಿಖೆಯಾಗಬೇಕು" ಎಂದಿದ್ದಾರೆ.
"ನಾನು ರಮೇಶ್ ಜಾರಕಿಹೊಳಿ ಅವರ ಸ್ಥಾನ ಹೋಗಬೇಕು ಎಂದು ಹೀಗೆ ಮಾಡಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ಈ ರೀತಿ ಮಾಡಿದೆ" ಎಂದಿದ್ದಾರೆ.