ಮುಜಾಫ್ಫರ್ನಗರ, ಮಾ.07 (DaijiworldNews/HR): ನೂತನ ಹೊಸ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಪ್ರತಿಭಟನೆ, ಹೋರಾಟ ಮುಂದುವರಿಯುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರ ರೈತರು ಈ ಬೇಡಿಕೆಗಳನ್ನು ಈಡೇರಿಸುವವರೆಗೆ ಆಂದೋಲನೆ ಮುಂದುವರಿಯುತ್ತದೆ ಎಂದು ಅವರು ಪುನರುಚ್ಚರಿಸಿದ್ದು, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಎಲ್ಲ ಜಿಲ್ಲೆಗಳಲ್ಲಿ ಟ್ರಾಕ್ಟರ್ ಸಂಚರಿಸಿ, ಮಾರ್ಚ್ 27 ರಂದು ಗಾಜಿಪುರದ ರೈತರ ಪ್ರತಿಭಟನಾ ಸ್ಥಳವನ್ನು ತಲುಪಲಿದೆ" ಎಂದರು.
ಇನ್ನು ಮುಜಾಫ್ಫರ್ನಗರ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಸಂಜೀವ್ ಬಾಲ್ಯನ್ ಮಾತನಾಡಿ, "ನೂತನ ಮೂರು ಕೃಷಿ ಕಾಯ್ದೆಗಳು ರೈತರಿಗೆ ಪ್ರಯೋಜನಕಾರಿಯಾಗಲಿದ್ದು, ಒಂದು ವೇಳೆ ಈ ಕಾಯ್ದೆಗಳಿಂದಾಗಿ ಒಬ್ಬ ರೈತ ಜಮೀನು ಕಳೆದುಕೊಂಡರೂ ನಾನು ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದ್ದಾರೆ.