ಮೇದಿನಿನಗರ್, ಮಾ.07 (DaijiworldNews/PY): 17 ವರ್ಷದ ಗರ್ಭಿಣಿ ಹತ್ಯೆ ಮಾಡಿ ಸಮಾಧಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಮೃತಳ 18 ವರ್ಷದ ಪ್ರೇಮಿ ಹಾಗೂ ಆತನ ಸ್ನೇಹಿತನನ್ನು ಶನಿವಾರದಂದು ಹುಸೇನಾಬಾದ್ ಪೊಲೀಸ್ ಠಾಣೆ ಪ್ರದೇಶದ ಕೊರಿಯಾಡಿ ಗ್ರಾಮದಲ್ಲಿ ಬಂಧಿಸಲಾಗಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಸಂತ್ರಸ್ತೆಯು ವಿವಾಹವಾಗುವಂತೆ ತನ್ನ ಪ್ರೇಮಿಯನ್ನು ಒತ್ತಾಯಿಸಿದ ಕಾರಣ ಆತ ಈ ಕೃತ್ಯವೆಸಗಿದ್ದಾನೆ. ಗರ್ಭಪಾತ ಮಾಡಿಸಲು ಓರ್ವ ನರ್ಸ್ ಅನ್ನು ಆತ ಸಂಪರ್ಕಿಸಿದ್ದು, ಆದರೆ, ನರ್ಸ್ 10 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಳು. ಹಣವನ್ನು ಹೊಂದಿಸಲು ಆಗದೇ ಇದ್ದ ಕಾರಣ ಯುವತಿಯನ್ನು ಹತ್ಯೆ ಮಾಡಿದ್ದಾನೆ.
ಫೆ.21ರಂದು ಯುವತಿಯನ್ನು ಅಪರಿಚಿತ ಸ್ಥಳಕ್ಕೆ ಕೊಂಡೊಯ್ದ ಆತ, ಆಕೆಯ ಕತ್ತು ಕೊಯ್ದು ಹತ್ಯೆಗೈದಿದ್ದ.