ಬೇಗುಸರೈ, ಮಾ.07 (DaijiworldNews/PY): "ಅಧಿಕಾರಿಗಳು ಮಾತು ಕೇಳದೇ ಇದ್ದಲ್ಲಿ ಅವರಿಗೆ ಬಿದಿರು ಕೋಲಿನಿಂದ ಬಾರಿಸಿ" ಎಂದು ಸಚಿವ ಗಿರಿರಾಜ್ ಸಿಂಗ್ ಅವರು ಬೇಗುಸರೈ ನಿವಾಸಿಗಳಿಗೆ ಸಲಹೆ ನೀಡಿದ್ದಾರೆ.
ಖೋಡಾವಾಂಡ್ಪುರದಲ್ಲಿ ಕೃಷಿ ಸಂಸ್ಥೆ ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, "ಜನರ ಸಮಸ್ಯೆಗಳನ್ನು ಆಲಿಸದ ಅಧಿಕಾರಿಗಳಿಗೆ ಬಿದಿರು ಕೋಲಿನಿಂದ ಬಾರಿಸಿ" ಎಂದಿದ್ದಾರೆ.
"ಇಂತಹ ಸಣ್ಣ-ಸಣ್ಣ ವಿಷಯಗಳಿಗಾಗಿ ನೀವು ನನ್ನ ಬಳಿ ಏಕೆ ಬರುತ್ತೀರಿ. ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಇವರೆಲ್ಲರೂ ಕೂಡಾ ಜನರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಅವರಿಗೆ ಬಿದಿರು ಕೋಲಿನಿಂದ ಅವರ ತಲೆಗೆ ಹೊಡೆಯಿರಿ" ಎಂದು ಸೂಚಿಸಿದ್ದಾರೆ.