ನವದೆಹಲಿ, ಮಾ.07 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು ಶಿಶಿಲ್ಲಾಂಗ್ ನ ನೈಗ್ರಿಮ್ಸ್ (ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ7,500 ನೇ ಜನೌಶಧಿ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದ್ದಾರೆ.
ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸುವ ಹೊಸ ಕೇಂದ್ರವನ್ನು ಸಮರ್ಪಿಸಿದ ಪ್ರಧಾನಿ ಮೋದಿ, ದೇಶದ ವಿವಿಧ ಭಾಗಗಳ ಜನರೊಂದಿಗೆ ಸಂವಹನ ನಡೆಸಿದದ್ದಾರೆ.
2014 ರಲ್ಲಿ 86 ಕೇಂದ್ರಗಳಿಂದ ಆರಂಭವಾದ ಯೋಜನೆ ಈಗ 7,500 ಕ್ಕೆ ಏರಿಕೆಯಾಗಿದೆ, ಇದು ದೇಶದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಇನ್ನು ಜನೌಷಧಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಮಾರ್ಚ್ 1 ರಿಂದ ಮಾರ್ಚ್ 7 ರವರೆಗೆ "ಜನೌಷಧಿ ಸೇವಾ ಭಿ, ರೊಜ್ಗರ್ ಭಿ" ಎಂಬ ವಿಷಯದೊಂದಿಗೆ ದೇಶದಾದ್ಯಂತ "ಜನೌಷಧಿ ವಾರ"ಎಂದು ಆಚರಿಸಲಾಗುತ್ತಿದೆ.