ನವದೆಹಲಿ, ಮಾ.07 (DaijiworldNews/PY): ಉಜ್ವಲ ಯೋಜನೆಯಡಿ ಮೂರು ಗೃಹಬಳಕೆ ಅನಿಲ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲು ಕೆಂದ್ರ ಸರ್ಕಾರ ಚಿಂತನೆ ಮಾಡಿದೆ.
ಜಾಗತಿಕ ಬೆಲೆ ಏರಿಕೆ ಹಿನ್ನೆಲೆ, ಜನವರಿಯಿಂದ 14.2 ಕೆ.ಜಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ 125 ರೂ.ಗಿಂತ ಹೆಚ್ಚಾಗಿದೆ. ಈ ಹಿನ್ನೆಲೆ ಜನವರಿಯಲ್ಲಿ ಎಲ್ಪಿಜಿ ದರವು 694 ರೂ.ಗಳಿಂದ 819 ರೂ.ಗೆ ಹೆಚ್ಚಳವಾಗಿದೆ.
ಎಪ್ರಿಲ್ನಿಂದ ಮೂರು ತಿಂಗಳ ಕಾಲ ಉಜ್ವಲ ಯೋಜನೆ ಫಲಾನುಭವಿಗಳಿಗೆ ತಿಂಗಳಿಗೆ ಒಂದರಂತೆ ಮೂರು ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು. ಈ ಬಗೆಗಿನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸಿದೆ.
ಕೊರೊನಾ ಸಾಂಕ್ರಾಮಿಕವು ಇನ್ನೂ ದೇಶದ ಮೇಲೆ ಪರಿಣಾ ಬೀರುತ್ತಿರುವುದರಿಂದ ಹಾಗೂ ವಿವಿಧ ಹಂತಗಳಲ್ಲಿ ಅಡ್ಡಿ ಉಂಟುಮಾಡುವುದರಿಂದ ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಸರ್ಕಾರ ಮತ್ತಷ್ಟು ಉತ್ತೇಜನ ಕ್ರಮಗಳನ್ನು ತರಬಹುದು ಎಂದು ಮೂಲಗಳು ಹೇಳಿವೆ.
ಜನವರಿಯಲ್ಲಿ 694 ರೂ. ಇದ್ದ ಸಿಲಿಂಡರ್ ಇದೀಗ 819 ರೂ.ಗೆ ಏರಿಕೆಯಾಗಿದೆ. ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಸಿಲಿಂಡರ್ ದರ 237.50 ರೂ. ಹೆಚ್ಚಾಗಿದ್ದು, ಕಳೆದ ಮೂರು ತಿಂಗಳಿನಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ನಲ್ಲಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗಿತ್ತು. ಅದೇ ರಿತಿಯಾಗಿ ಈ ಬಾರಿಯೂ ಕೂಡಾ ಉಚಿತವಾಗಿ ಮೂರು ಸಿಲಿಂಡರ್ಗಳನ್ನು ನೀಡಲಾಗುವುದು ಎನ್ನಲಾಗಿದೆ.