ಬಳ್ಳಾರಿ, ಮಾ.07 (DaijiworldNews/MB): ನಗರದ ಕೇಂದ್ರ ಕಾರಾಗೃಹದಲ್ಲಿದ್ದ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣದ 29 ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಗಲಭೆ ಪ್ರಕರಣದ ಒಟ್ಟು 81 ಆರೋಪಿಗಳನ್ನು ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ವಿಚಾರಣೆಗಾಗಿ ಬೆಂಗಳೂರು ಪೊಲೀಸರು 10 ಕ್ಕೂ ಹೆಚ್ಚು ಆರೋಪಿಗಳ ವಶಕ್ಕೆ ಪಡೆದಿದ್ದರು. ಜಾಮೀನಿನ ಮೇರೆಗೆ ಕಳೆದ ಒಂದು ವಾರದಿಂದ ದಿನಕ್ಕೆ ಮೂರು ಅಥವಾ ನಾಲ್ಕರಂತೆ ಆರೋಪಿಗಳು ಬಿಡುಗಡೆ ಮಾಡಲಾಗಿದೆ.
ಮಾರ್ಚ್ 5 ರ ಶುಕ್ರವಾರ ರಾತ್ರಿ 29 ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. 25 ಕ್ಕೂ ಹೆಚ್ಚು ಆರೋಪಿಗಳು ಇನ್ನೂ ಜೈಲಿನೊಳಗೆ ಇದ್ದಾರೆ.